ಸಾನ್ ಅಂಟೊನಿಯೊ, ಶುಕ್ರವಾರ, 18 ಸೆಪ್ಟೆಂಬರ್ 2009( 16:45 IST )
PTI
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇಫ್ತೇಕಾರ್ ಮೊಹಮ್ಮದ್ ಚೌಧರಿಯವರನ್ನು ಅಮಾನತುಗೊಳಿಸಿ ತಪ್ಪು ಎಸಗಿದ್ದೇನೆ ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಹೇಳಿದ್ದಾರೆ.
ಟೆಕ್ಸಾನ್‌ನ ಸಾನ್ ಅಂಟೊನಿಯೊದಲ್ಲಿರುವ ಟ್ರಿನಿಟ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದ ಮುಷ್ರಫ್, ಮುಖ್ಯ ನ್ಯಾಯಮೂರ್ತಿಗಳನ್ನು ಅಮಾನತುಗೊಳಿಸಿದ ನಂತರದ ಬೆಳವಣಿಗೆಗಳನ್ನು ನೋಡಿದಲ್ಲಿ ನಾನು ಎಸಗಿದ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಇಫ್ತೇಕಾರ್ ಚೌಧರಿಯವರನ್ನು ಅಮಾನತುಗೊಳಿಸಿದಾಗ ವ್ಯಯಕ್ತಿಕವಾಗಿ ದ್ವೇಷವಿರಲಿಲ್ಲ. ಅಥವಾ ಪ್ರಸ್ತುತ ಸಮಯದಲ್ಲಿ ಕೂಡಾ ನನಗೆ ಅವರ ಮೇಲೆ ದ್ವೇಷವಿಲ್ಲ ಎಂದು ಮುಷ್ರಫ್ ಹೇಳಿದ್ದಾರೆ.
ಪರ್ವೇಜ್ ಮುಷ್ರಫ್ ರಾಷ್ಟ್ರಾಧ್ಯಕ್ಷರಾಗಿದ್ದಾಗ, ನವೆಂಬರ್ 2007ರಲ್ಲಿ ಇಫ್ತೇಕಾರ್ ಮೊಹಮ್ಮದ್ ಚೌಧರಿಯವರನ್ನು , ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಅಮಾನತುಗೊಳಿಸಿದ್ದರು.
ಇಸ್ಲಾಮಾಬಾದ್‌ನ ಹೆಚ್ಚುವರಿ ನ್ಯಾಯಾಧೀಶರಾದ ಮೊಹಮ್ಮದ್ ಅಖ್ಮಲ್ ಖಾನ್ ಅವರ ಆದೇಶದ ಮೇರೆಗೆ ,ಪೊಲೀಸರು ಮುಷ್ರಫ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿದ್ದಾರೆ.