ಮುಂಬೈ ಭಯೋತ್ಪಾದನೆ ದಾಳಿ ರೂವಾರಿ ಹಫೀಜ್ ಸಯೀದ್‌ನನ್ನು ಬಂಧಿಸುವಂತೆ ಅಮೆರಿಕದ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಜಮಾತ್ ಉದ್ ದವಾದ ವರಿಷ್ಠ ಸಯೀದ್‌ನನ್ನು ಶೀಘ್ರವೇ ಬಂಧಿಸುವುದಾಗಿ ಪಾಕಿಸ್ತಾನ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಪಾಕಿಸ್ತಾನದ ಪೊಲೀಸರು ಗುರುವಾರ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಹಫೀಜ್ ಹಾಗೂ ಆತನ ನಿಕಟವರ್ತಿ ಅಬು ಜಂದಾಲ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಗುರುವಾರ ರಾತ್ರಿ ಮೂರು ಎಫ್‌ಐಆರ್ ವರದಿ ತಯಾರಿಸಲಾಗಿದ್ದು, ಸಯೀದ್ ವಿರುದ್ಧ ಎರಡು ಹಾಗೂ ಅಬು ಜಂದಾಲ್ ವಿರುದ್ಧ ಫೈಸ್ಲಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಆಗೋಸ್ಟ್ 27-28ರಂದು ಫೈಸಲಾಬಾದ್‌ಗೆ ಭೇಟಿ ನೀಡಿದ್ದ ಸಂಬಂಧವಾಗಿ ದೂರನ್ನು ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ನಿಷೇಧಿತ ಉಗ್ರಗಾಮಿ ಸಂಘಟನೆಯಾಗಿರುವ ಲಷ್ಕರ್ ಎ ತೊಯ್ಬಾದ ಸ್ಥಾಪಕನಾಗಿರುವ ಹಮೀದ್ ಸಯೀದ್ ಮುಂಬೈ ಭಯೋತ್ಪಾದನೆಯ ದಾಳಿ ಪ್ರಮುಖ ರೂವಾರಿ ಎಂದು ಭಾರತ ಆರೋಪಿಸಿದೆ.