ಬ್ರಿಟನ್ ರಾಯಲ್ ಕುಟುಂಬದ ಗೌರವ ರಕ್ಷಣೆಗಾಗಿ ರಾಜಕುಮಾರಿ ಡಯಾನಾ ಬರೆದ ಪತ್ರಗಳನ್ನು 2ನೇ ಕ್ವೀನ್ ಎಲಿಜಬೆತ್ ಕಿರಿಯ ಸಹೋದರಿ ಸುಟ್ಟುಹಾಕಿದ್ದಾರೆ ಎಂದು ನೂತನವಾಗಿ ಪ್ರಕಟವಾದ ಪುಸ್ತಕವೊಂದರಲ್ಲಿ ಬಹಿರಂಗವಾಗಿದೆ.
ಡಯಾನಾ ಬರೆದಿದ್ದ ಸಂಪೂರ್ಣ ಖಾಸಗಿಯಾಗಿದ್ದ ಪತ್ರಗಳನ್ನು ನಾಶಪಡಿಸುವಂತೆ ಆದೇಶ ನೀಡಿದ್ದೆ, ಎಂದು ಬ್ರಿಟನ್‌ನ ದಿವಂಗತ ರಾಜಕುಮಾರಿ ಮಾರ್ಗರೇಟ್, ತನ್ನ ಆತ್ಮೀಯ ಗೆಳತಿಗೆ ಹೇಳಿದ್ದರು ಎನ್ನಲಾಗಿದೆ.
ಪತ್ರಕರ್ತ ವಿಲಿಯಮ್ ಶಾವೊಕ್ರಾಸ್ ಬರೆದ ' ಕ್ವೀನ್ ಎಲಿಜಬೆತ್ ದಿ ಕ್ವೀನ್ ಮದರ್ ಎನ್ನುವ' ಎನ್ನುವ ಅಧಿಕೃತ ಜೀವನಚರಿತ್ರೆಯನ್ನು ಬರೆದಿದ್ದು, ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾ ಪರಸ್ಪರ ವಿಚ್ಚೇದನ ಘೋಷಿಸಿದ ಕೆಲ ತಿಂಗಳುಗಳ ನಂತರ, 1993ರಲ್ಲಿ ಪ್ರಿನ್ಸೆಸ್ ಮಾರ್ಗರೇಟ್ ತನ್ನ ತಾಯಿಯ ಪತ್ರಗಳೊಂದಿಗೆ ತೆರಳಿದ್ದಳು ಎಂದು ಉಲ್ಲೇಖಿಸಲಾಗಿದೆ.
ಜರ್ನಲಿಸ್ಟ್ ಆಂಡ್ರೂ ಮೊರ್ಟಾನ್ಸ್ ಬರೆದ , " ಡಯಾನಾ ಹರ್ ಟ್ರೂ ಸ್ಟೋರಿ " ಪುಸ್ತಕದಲ್ಲಿ , ಡಯಾನಾ ತಾನು ಕೇವಲ ಚಾರ್ಲ್ಸ್‌ನಿಂದ ತಿರಸ್ಕ್ರತವಾಗುವುದಲ್ಲದೇ, ಕ್ವೀನ್ ಮತ್ತು ಇತರ ರಾಯಲ್ ಕುಟುಂಬದ ಸದಸ್ಯರು ಕೂಡಾ ತನ್ನನ್ನು ತಿರಸ್ಕರಿಸಬಹುದು ಎನ್ನುವ ಆತಂಕ ಹೊಂದಿದ್ದರು ಎನ್ನುವ ಮಾಹಿತಿ ಬಹಿರಂಗಪಡಿಸಿದ್ದಾರೆ
ಡಯಾನಾಗೆ ಸೇರಿದ ಖಾಸಗಿ ಪತ್ರಗಳನ್ನು ಮಾರ್ಗರೇಟ್ ಸುಟ್ಟುಹಾಕಿದ್ದಾಳೆ ಎನ್ನುವ ಮಾಹಿತಿ ಕೂಡಾ ಕ್ವೀನ್ ಎಲಿಜಬೆತ್‌ಗೆ ತಲುಪಿತ್ತು ಎಂದು ದಿ ಟೆಲಿಗ್ರಾಫ್ ನ್ಯೂಸ್ ಪೇಪರ್ ವರದಿ ಮಾಡಿದೆ.