ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕದಿಯುಲುದ್ದೇಶಿಸಿದ ಕಾರಿನೊಳಗೆ ನಿದ್ರಿಸಿದ ಕಳ್ಳ! (Thief | arrested | car | Henan)
 
ನಿಮ್ಗೊಂದು ಹಳೆ ಜೋಕ್ ಗೊತ್ತಿರಬಹುದು. ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಲು ತೆರಳಿದ್ದ. ಆದರೆ ನೀರು ತಣ್ಣಗಿದೆ ಅನ್ನತ್ತಾ ಬಿಸಿಯಾಗಲು ಕಾಯುತ್ತಾ ಕುಳಿತಿದ್ದನಂತೆ. ಅಂತೆಯೇ ಇಲ್ಲೊಬ್ಬ ಕಾರು ಕಳ್ಳ ಹೊರಗಡೆ ಭಯಂಕರ ಚಳಿ ಇದೆ ಎಂದು ತಾನು ಕದಿಯಲುದ್ದೇಶಿಸಿದ್ದ ಕಾರಿನಲ್ಲೇ ಮಲಗಿ, ಪೊಲೀಸರ ಅತಿಥಿಯಾಗಿರುವ ಸೋಜಿಗ ಸಂಭವಿಸಿದೆ.

ಈ ಕುತೂಹಲಕಾರಿ ಘಟನೆ ಚೀನದ ಹೆನನ್ ಪ್ರಾಂತ್ಯದಲ್ಲಿ ಸಂಭವಿಸಿದೆ. ಕಾರಿನೊಳಗೆ ಮಲಗಿ ನಿದ್ರಿಸುತ್ತಿದ್ದ ಕಳ್ಳನ ಹೆಸರೇನು ಎಂಬುದು ತಿಳಿದು ಬಂದಿಲ್ಲ.

"ಹೊರಗಡೆ ತುಂಬ ಚಳಿ ಇದ್ದುದರಿಂದ ಕಾರಿನೊಳಗಡೆ ಮಲ್ಕೊಂಡೆ ಅಂತ ಹೇಳಿದ್ದಾನೆ" ಎಂಬುದಾಗಿ ಪೊಲೀಸರು ತಿಳಿಸಿರುವುದಾಗಿ ಚೀನ ಡೇಲಿ ವರದಿಮಾಡಿದೆ.

ತನ್ನ ಕಾರಿನೊಳಗೆ ಯಾರೋ ಮಲಗಿರುವುದನ್ನು ಕಂಡ ಕಾರಿನ ಮಾಲಕ ಲಿಯೋ ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸ್ ಬಂದು ಎಬ್ಬಿಸಿದಾಗ ಕಳ್ಳನ ಮುಖ ಹುಳ್ಳಹುಳ್ಳಗಾಯಿತು.
ಸಂಬಂಧಿತ ಮಾಹಿತಿ ಹುಡುಕಿ