ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೊಸ ಉದ್ಯೋಗ : ಒಂದು ಡಾಲರ್‌ಗೆ ಒಂದು ಕಿಸ್..! (Australia | business enterprise | Lachlan Christie | kiss | Queen Victoria Building)
 
PTI
ಆಸ್ಟ್ರೇಲಿಯಾದ 24 ವರ್ಷ ವಯಸ್ಸಿನ ಯುವಕನೊಬ್ಬ ಹೊಸ ವಹಿವಾಟು ಆರಂಭಿಸಿದ್ದಾನೆ. ಒಂದು ಡಾಲರ್‌ಗೆ ಒಂದು ಕಿಸ್ ನೀಡುವುದು ಅವನ ಹೊಸ ವಹಿವಾಟಿನ ರಹಸ್ಯ.

ಲಾಚಲನ್ ಕ್ರಿಸ್ಟಿ ಎಂಬಾತ ಕ್ವೀನ್ ವಿಕ್ಟೋರಿಯಾ ಕಟ್ಟಡದ ಆವರಣದಲ್ಲಿ, ಕಳೆದ ಎರಡು ವಾರಗಳಿಂದ 'ಕಿಸ್' ಮಾರಾಟ ಆರಂಭಿಸಿದ್ದಾನೆ. ಪ್ರತಿನಿತ್ಯ 5 ರಿಂದ 10 ಡಾಲರ್ ಸಂಪಾದಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ..

ಇದೊಂದು ಸಮಾಜ ಸೇವೆಯಾಗಿದೆ. ಸಮಾಜ ಸೇವೆ ಮಾಡುವ ಮೂಲಕ 'ಕಿಸ್: ನೀಡುವಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಿದ್ದೇನೆ ಎಂದು ಹೆರಾಲ್ಡ್ ಸನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.

ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ತಿಳಿಯುವುದೇ ಪ್ರಮುಖ ಕಾರಣವಾಗಿದೆ. ಸಾಮಾಜಿಕ ಕಟ್ಟು ಪಾಡುಗಳನ್ನು ಮುರಿಯುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾನೆ.

ಕಳೆದ 50 ನಿಮಿಷಗಳಲ್ಲಿ ಮೂರು "ಕಿಸ್"ಗಳನ್ನು ಮಾರಾಟ ಮಾಡಿದ್ದೇನೆ. ಆದರೆ ಯುವತಿಯರು ಅಪರಿಚಿತನಿಂದ ತುಟಿಗಳಿಗೆ ಕಿಸ್ ಪಡೆಯುವಾಗ ಇಷ್ಟವಿಲ್ಲದವರಂತೆ ವರ್ತಿಸುತ್ತಾರೆ ಎನ್ನುವ ಭಯಂಕರ ರಹಸ್ಯವನ್ನು ಹೊರಹಾಕಿದ್ದಾನೆ.

ನನಗೆ ಧೈರ್ಯವಂತ ಯುವತಿಯರು "ಕಿಸ್" ಪಡೆಯಲು ಮುಂದೆ ಬರಬೇಕಾಗಿದೆ. ನನಗೆ ಇನ್ನೂ ಮದುವೆಯಾಗಿಲ್ಲ.ಮದುವೆಗಾಗಿ ಯುವತಿಯರ ಹುಡುಕಾಟ ನಡೆಸುತ್ತಿರುವುದನ್ನೂ ತಳ್ಳಿಹಾಕಿದ್ದಾನೆ.

ಅನೇಕರು ಕಿಸ್ ಕೊಡುವುದು ಬೇಡ ದುಡ್ಡು ತೆಗೆದುಕೋ ಎಂದು ಹೇಳುತ್ತಾರೆ. ಒಂದು ವೇಳೆ ನಾನು ಪ್ರಖ್ಯಾತನಾದಲ್ಲಿ ನನ್ನ ಉದ್ಯಮಕ್ಕೆ ಶುಕ್ರದೆಸೆ ಆರಂಭವಾಗುತ್ತದೆ. ಜನತೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೋ ಅಥವಾ ಇಲ್ಲವೋ ಎನ್ನುವುದು ನನಗೆ ತಿಳಿದಿಲ್ಲವೆಂದು ಹೇಳಿದ್ದಾನೆ.

ಸಿಡ್ನಿಯಲ್ಲಿರುವ ಮತ್ತೊಬ್ಬ ಮಹಾನುಭಾವ ಫ್ರಿ ಹಗ್ ಮ್ಯಾನ್‌, ಜುವಾನ್ ಮಾನ್ ತಮಗೆ ಸ್ಪೂರ್ತಿಯಾಗಿದ್ದಾರೆ ಎಂದು ಲಾಚಲನ್ ಹೇಳಿಕೊಂಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ