ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೊ: 3 ದಿನಗಳಲ್ಲಿ 1300 ಎಚ್‌1ಎನ್‌1 ಪ್ರಕರಣ (Mexico | Swine flu | Cordova | Virus)
 
ಮೆಕ್ಸಿಕೊದಲ್ಲಿ ಎಚ್‌1ಎನ್‌1 ಫ್ಲೂ ಜ್ವರದ 1341 ಹೊಸ ಪ್ರಕರಣಗಳು ಸೋಮವಾರದಿಂದ ವರದಿಯಾಗಿದ್ದು, ಹಂದಿ ಜ್ವರದ ಸೋಂಕಿಗೆ ಗುರಿಯಾದವರ ಸಂಖ್ಯೆ 26,338ಕ್ಕೆ ಮುಟ್ಟಿದೆ. ಸೋಮವಾರ ಮತ್ತು ಗುರುವಾರದ ನಡುವೆ ಎಚ್‌1ಎನ್‌1 ವೈರಸ್‌ಗೆ ಇನ್ನೊಬ್ಬ ವ್ಯಕ್ತಿ ಬಲಿಯಾಗಿದ್ದು, ದೇಶದಲ್ಲಿ ಹಂದಿ ಜ್ವರದಿಂದ ಸಾವಿಗೀಡಾದವರ ಸಂಖ್ಯೆ 218ಕ್ಕೆ ಮುಟ್ಟಿದೆ.

ಹಂದಿ ಜ್ವರವು ಮಹಾಮಾರಿಯಾಗಿ ಹರಡುವುದಕ್ಕೆ ಮುಂಚಿತವಾಗಿ ಎಪ್ರಿಲ್‌ನಲ್ಲಿ ಮೆಕ್ಸಿಕೊದಲ್ಲಿ ಮೊದಲಿಗೆ ಹುಟ್ಟಿಕೊಂಡಿತು. ಮೆಕ್ಸಿಕೊದ 100 ದಶಲಕ್ಷ ಜನಸಂಖ್ಯೆಯಲ್ಲಿ ಸುಮಾರು 10 ಲಕ್ಷ ಜನರು ಹಂದಿ ಜ್ವರದ ವೈರಸ್ ಸೋಂಕಿಗೆ ಈ ಚಳಿಗಾಲದಲ್ಲಿ ಈಡಾಗಬಹುದು ಎಂದು ಆರೋಗ್ಯ ಸಚಿವ ಜೋಸ್ ಏಂಜಲ್ ಕಾರ್ಡೋವಾ ಅಂದಾಜು ಮಾಡಿದ್ದಾರೆ.

ಹಂದಿ ಜ್ವರದ ಮಾಹಾಮಾರಿಗೆ ಜಗತ್ತಿನಲ್ಲಿ ಒಟ್ಟು ಬಲಿಯಾದವರ ಸಂಖ್ಯೆ 3486ಕ್ಕೇರಿದೆಯೆಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದ್ದು, ಸೋಂಕಿಗೆ 296,471 ಜನರು ಗುರಿಯಾಗಿದ್ದಾರೆಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ