ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ-ರಷ್ಯಾ ಜಂಟಿ ಕ್ಷಿಪಣಿ ರಕ್ಷಣಾ ಕವಚ (Russia | Missile | Rasmussen | Defense)
 
ಅಮೆರಿಕ ಮತ್ತು ರಷ್ಯಾ ಜತೆ ಸಹಕಾರದ ನೂತನ ಶಕೆಯನ್ನು ನ್ಯಾಟೊ ಪ್ರಸ್ತಾಪಿಸಿದ್ದು, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಜಂಟಿ ಕೆಲಸಕ್ಕೆ ಕರೆ ನೀಡಿದೆ. ರಷ್ಯಾ ಜತೆ ಬಾಂಧವ್ಯ ಕೆಡಲು ಕಾರಣವಾಗಿದ್ದ ಪೂರ್ವ ಐರೋಪ್ಯ ಕ್ಷಿಪಣಿ ರಕ್ಷಣಾ ಕವಚದ ಬುಷ್ ಶಕೆಯ ಯೋಜನೆಯನ್ನು ಅಮೆರಿಕ ಬದಿಗಿರಿಸಿದ ಒಂದು ದಿನದ ಬಳಿಕ ಪ್ರಧಾನ ಕಾರ್ಯದರ್ಶಿ ಆಂಡರ್ಸ್ ಫಾಗ್ ರಾಸ್‌ಮುಸೆನ್ ಐಕ್ಯತೆಗೆ ಮನವಿ ಮಾಡಿದರು.

ಪೂರ್ವಾಧಿಕಾರಿ ಜಾರ್ಜ್ ಬುಷ್ ಯೋಜಿಸಿದ ಕ್ಷಿಪಣಿ ರಕ್ಷಣಾಕವಚವನ್ನು ಕೈಬಿಡುವ ಅಧ್ಯಕ್ಷ ಬರಾಕ್ ಒಬಾಮಾ ನಿರ್ಧಾರವನ್ನು ರಷ್ಯಾದ ಪ್ರಧಾನಮಂತ್ರಿ ವ್ಲಾಡಿಮಿರ್ ಪುಟಿನ್ ಸರಿಯಾದ ಮತ್ತು ದಿಟ್ಟ ಕ್ರಮವೆಂದು ವರ್ಣಿಸಿದ್ದಾರೆ. ಆದರೆ ಇದೊಂದು ಅಪಾಯಕಾರಿ ದೌರ್ಬಲ್ಯವೆಂದು ಶ್ವೇತಭವನದ ವಿರುದ್ಧ ಟೀಕಾಕಾರರು ಆರೋಪಿಸಿದ್ದಾರೆ. ನ್ಯಾಟೊ ಮತ್ತು ರಷ್ಯಾ ನಡುವೆ ಹೊಸ ಆರಂಭ ಮತ್ತು ಭವಿಷ್ಯದಲ್ಲಿ ಫಲಪ್ರದ ಸಂಬಂಧವನ್ನು ಅನುಭವಿಸಲು ಸಾಧ್ಯವೆಂದು ತಾವು ನಂಬಿರುವುದಾಗಿ ರಾಸ್‌ಮುಸೆನ್ ತಿಳಿಸಿದರು.

ಅಮೆರಿಕ, ನ್ಯಾಟೊ ಮತ್ತು ರಷ್ಯಾ ರಕ್ಷಣಾ ವ್ಯವಸ್ಥೆಗಳನ್ನು ಸೂಕ್ತ ಕಾಲದಲ್ಲಿ ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕೆಂದು ಅವರು ಹೇಳಿದ್ದಾರೆ.ಈ ನಿರ್ಧಾರದಿಂದ ನ್ಯಾಟೊ ಮಿತ್ರಕೂಟ ದುರ್ಬಲವಾಗಿಲ್ಲ ಎಂದು ರಾಸ್‌ಮುಸೆನ್ ಹೇಳಿದರು. ಶೀತಲ ಯುದ್ಧ ಕೊನೆಗೊಂಡಂದಿನಿಂದ ರಷ್ಯಾ ಜತೆ ನ್ಯಾಟೊ ಬಾಂಧವ್ಯ ಸುಧಾರಿಸಿದೆ. ಆದರೆ ಪೂರ್ವ ಯುರೋಪ್‌ನಲ್ಲಿ ಕ್ಷಿಪಣಿ ರಕ್ಷಣಾ ಕವಚ ವ್ಯವಸ್ಥೆಯಿಂದ ಮತ್ತು ಜಾರ್ಜಿಯದಲ್ಲಿ ಕಳೆದ ವರ್ಷ ಮಾಸ್ಕೊ ಯುದ್ಧದಿಂದ ಸಂಬಂಧ ಹದಗೆಟ್ಟಿತ್ತು.
ಸಂಬಂಧಿತ ಮಾಹಿತಿ ಹುಡುಕಿ