ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11ರ ವಿಚಾರಣೆ ಸೆ.26ಕ್ಕೆ ಮುಂದೂಡಿದ ಕೋರ್ಟ್ (Pak court | Mumbai | Lakhvi | Hearings)
 
ಮುಂಬೈ ಭಯೋತ್ಪಾದನೆ ದಾಳಿಗಳ ಜತೆ ಸಖ್ಯ ಹೊಂದಿರುವ ಲಷ್ಕರೆ ತೊಯ್ಬಾ ಕಾರ್ಯಾಚರಣೆ ಕಮಾಂಡರ್ ಜಾಕಿರ್ ರೆಹ್ಮಾನ್ ಲಖ್ವಿ ಸಹಿತ 7 ಶಂಕಿತರ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ನಿಗ್ರಹ ಕೋರ್ಟ್ ಸೆ.26ರವರೆಗೆ ತನ್ನ ವಿಚಾರಣೆಯನ್ನು ಮುಂದೂಡಿದೆ. ಮುಂಬೈ ಭಯೋತ್ಪಾದನೆ ದಾಳಿಗೆ ಕಾರಣಕರ್ತರ ವಿರುದ್ಧ ಶೀಘ್ರ ವಿಚಾರಣೆ ಮುಗಿಸಿ ಶಿಕ್ಷೆ ವಿಧಿಸಬೇಕೆಂದು ಭಾರತ ಆಗ್ರಹಿಸಿದ್ದರೂ, ಪಾಕಿಸ್ತಾನ ಸರ್ಕಾರದ ಕೈಗೊಂಬೆ ಕೋರ್ಟ್ 26/11 ದಾಳಿಕೋರರ ವಿಚಾರಣೆಯನ್ನು ಮುಂದಕ್ಕೆ ದೂಡುತ್ತಲೇ ಇದ್ದು, ವಿಳಂಬ ನೀತಿ ಅನುನರಿಸುತ್ತಿದೆ.

ವಿಚಾರಣೆಯ ವಿವರಗಳನ್ನು ಕೂಡ ಪಾಕಿಸ್ತಾನ ಕೋರ್ಟ್ ಬಹಿರಂಗಮಾಡದೇ ರಹಸ್ಯವನ್ನು ಕಾಯ್ಡುಕೊಳ್ಳುತ್ತಿದೆ. ನ್ಯಾಯಾಧೀಶ ಬಾಕಿರ್ ಅಲಿ ರಾನಾ ಅವರು ವಿಚಾರಣೆಯ ವಿವರಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ಕಠಿಣ ನಿಷೇಧ ವಿಧಿಸಿದ್ದರಿಂದ ವಿಚಾರಣೆಯ ಇತರೆ ವಿವರಗಳು ಲಭ್ಯವಾಗಿಲ್ಲ.

ಬಿಗಿ ಭದ್ರತೆಯ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ರಾನಾ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯನ್ನು ರಹಸ್ಯವಾಗಿ ನಡೆಸಲಾಗುತ್ತಿದ್ದು, ನ್ಯಾಯಾಧೀಶ ರಾನಾ ರಾಷ್ಟ್ರೀಯ ಭದ್ರತೆ ಕಾಳಜಿಯಿಂದ ಮತ್ತು ಆರೋಪಿಗಳು ಮತ್ತು ಸಾಕ್ಷಿಗಳ ಭದ್ರತೆ ದೃಷ್ಟಿಯಿಂದ ಮಾಧ್ಯಮ ಪ್ರಕಟಣೆಗೆ ನಿಷೇಧ ವಿಧಿಸಿದ್ದಾರೆ. ಶನಿವಾರದ ಕಲಾಪಗಳ ಬಳಿಕ ಸೆ.26ರವರೆಗೆ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದಾರೆಂದು ಮ‌ೂಲಗಳು ತಿಳಿಸಿವೆ. ಅಧಿಕಾರಿಗಳು ಆರೋಪಿಗಳ ವಿರುದ್ಧ ಎರಡು ಆರೋಪಪಟ್ಟಿಗಳನ್ನು ಸಿದ್ಧಪಡಿಸಿದ್ದರೂ, 7 ಮಂದಿ ಆರೋಪಿಗಳನ್ನು ತಪ್ಪಿತಸ್ಥರಾಗಿರಿಸಿರುವ ಬಗ್ಗೆ ಸ್ಪಷ್ಟವಾಗಿಲ್ಲ.

ಮಾಧ್ಯಮದ ಜತೆ ವಿಚಾರಣೆ ವಿವರ ಚರ್ಚಿಸದೇ ನಿಷೇಧಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವಂತೆ ನ್ಯಾಯಾಧೀಶರು ತಮಗೆ ಆದೇಶಿಸಿದ್ದಾರೆಂದು ಆರೋಪಿಗಳನ್ನು ಪ್ರತಿನಿಧಿಸುವ ವಕೀಲರು ತಿಳಿಸಿದ್ದಾರೆ. ಭಯೋತ್ಪಾದನೆ ನಿಗ್ರಹ ಕೋರ್ಟ್ ಐವರು ಲಷ್ಕರೆ ಉಗ್ರರಾದ ಲಖ್ವಿ, ಸಂಪರ್ಕ ತಜ್ಞ ಝರಾರ್ ಶಾ, ಅಬು ಅಲ್ ಖಾಮಾ, ಹಮದ್ ಅಮಿನ್ ಸಾದಿಖ್ ಮತ್ತು ಶಾಹಿದ್ ಜಮೀಲ್ ರಿಯಾಜ್ ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ವರ್ಷ ಮುಂಬೈನಲ್ಲಿ ದಾಳಿ ಮಾಡಿದ 10 ಭಯೋತ್ಪಾದಕರಿಗೆ ತರಬೇತಿ, ಹಣಕಾಸು ಬೆಂಬಲ, ವಸತಿ ಮತ್ತು ಸಂಪರ್ಕ ಜಾಲವನ್ನು ಒದಗಿಸಿದ್ದಾಗಿ ಆರೋಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ