ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ: ಸರ್ಕಾರೇತರರು ಕಾರಣವೆಂದ ಜರ್ದಾರಿ (London | Pakistan | Zardari | Terrorist)
 
ಸರ್ಕಾರೇತರ ವ್ಯಕ್ತಿಗಳು ಮತ್ತು ಸರ್ವಾಧಿಕಾರದ ಬೆಂಬಲಿಗರು ಭಯೋತ್ಪಾದನೆ ದಾಳಿಗಳಿಗೆ ಕಾರಣಕರ್ತರೆಂದು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಪುನಃ ಗೂಬೆ ಕೂರಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಾಯಕತ್ವ ಮಟ್ಟದ ಮಾತುಕತೆಯೆಂದು ಅವರು ಬಣ್ಣಿಸಿರುವ ಮಾತುಕತೆಗೆ ಮುನ್ನ, ಭಾರತದ ಜತೆ ಕಾಶ್ಮೀರ ವಿವಾದ ಪರಿಹಾರಕ್ಕೆ ಅರ್ಥಪೂರ್ಣ ಪ್ರಗತಿಗೆ ಜರ್ದಾರಿ ಕರೆ ನೀಡಿದರು.

ಭಯೋತ್ಪಾದಕ ದಾಳಿಗಳು ಸದಾ ಪ್ರಜಾಪ್ರಭುತ್ವದ ಮೇಲೆ ನಡೆಸಲಾಗುತ್ತದೆ. ನಾವು ಆರಂಭಿಸಿದ ಶಾಂತಿ ಪ್ರಕ್ರಿಯೆ ಮೇಲೆ ಕೂಡ ಭಯೋತ್ಪಾದಕ ದಾಳಿಯನ್ನು ಗುರಿಯಿರಿಸಲಾಗುತ್ತದೆಂದು ಶುಕ್ರವಾರ ವ್ಯೂಹಾತ್ಮಕ ಅಧ್ಯಯನಗಳ ಅಂತಾರಾಷ್ಟ್ರೀಯ ಸಂಸ್ಥೆಯ ಸಭಿಕರಿಗೆ ಅವರು ಹೇಳಿದರು. ಸಂಘರ್ಷಕ್ಕೆ ಪ್ರಚೋದನೆ ನೀಡಲು ಸರ್ಕಾರೇತರ ಪಾತ್ರಧಾರಿಗಳು ಮತ್ತು ಸರ್ವಾಧಿಕಾರದ ಬೆಂಬಲಿಗರು ಪಟ್ಟಭದ್ರ ಹಿತಾಸಕ್ತಿ ಹೊಂದಿರುತ್ತಾರೆ.

ಪಾಕಿಸ್ತಾನದಲ್ಲಿ ಬದಲಾವಣೆ ಬೇರುಬಿಡುವುದು ಅವರಿಗೆ ಇಷ್ಟವಿಲ್ಲ ಎಂದು ನುಡಿದರು.ಅಂತಾರಾಷ್ಟ್ರೀಯ ಸಮುದಾಯವು ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ಪ್ರಜಾಪ್ರಭುತ್ವ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಸಮುದಾಯ ಬೆಂಬಲ ಒಟ್ಟುಗೂಡಿಸಬೇಕು ಎಂದು ಜರ್ದಾರಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ