ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11 ತನಿಖೆ : ಸೋಂಬೇರಿ ಧೋರಣೆ ಬಿಂಬಿಸಿದ ಪಾಕ್ (Islamabad | Pak | India | Mumbai | Malik)
 
26/11 ಮುಂಬೈ ಭಯೋತ್ಪಾದನೆ ದಾಳಿಯನ್ನು ಕುರಿತು ಇನ್ನಷ್ಟು ಮಾಹಿತಿಯನ್ನು ಒದಗಿಸಬೇಕೆಂದು ಇಸ್ಲಾಮಾಬಾದ್ ಶನಿವಾರ ಭಾರತಕ್ಕೆ ಸೂಚಿಸುವ ಮ‌ೂಲಕ ಮುಂಬೈ ಭಯೋತ್ಪಾದನೆ ದಾಳಿ ಕುರಿತ ತನ್ನ ಸೋಂಬೇರಿತನದ ಧೋರಣೆಯನ್ನು ಮತ್ತೊಮ್ಮೆ ಬಿಂಬಿಸಿದೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್, ಭಾರತ ಮುಂಬೈ ದಾಳಿ ಕುರಿತಂತೆ ಆಂಶಿಕ ಮತ್ತು ಅಸಮರ್ಪಕ ಮಾಹಿತಿಗಳನ್ನು ನೀಡಿದ್ದರೂ ತಾವು ಮಾತ್ರ ಸಾಕಷ್ಟು ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡರು. ವಿವಿಧ ಸಾಕ್ಷ್ಯಾಧಾರಗಳ ಬಗ್ಗೆ ವಿಧಿವಿಜ್ಞಾನ ತಜ್ಞರ ಸಾಕ್ಷ್ಯ ಅಗತ್ಯವಿದ್ದು,ಭಾರತವು ಫಹೀಮ್ ಅನ್ಸಾರಿ ಹೇಳಿಕೆಯನ್ನು ಮುಂಚಿತವಾಗಿ ಏಕೆ ಕೊಟ್ಟಿಲ್ಲವೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

26/11ರ ತನಿಖೆ ಕುರಿತು ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆಂದು ಮಲಿಕ್ ಹೇಳಿದರು. 7 ಮಂದಿ ಆರೋಪಿಗಳ ವಿರುದ್ಧ ಚಲನ್‌ಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆಯೆಂದು ಅವರು ವಿವರಿಸಿದರು. ಅಬು ಕಾಮಾ, ಜರಾರ್ ಶಾ, ಲಖ್ವಿ ಮತ್ತು ಇನ್ನೂ ಮ‌ೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆಯೆಂದು ಮಲಿಕ್ ತಿಳಿಸಿದರು. ಪಾಕಿಸ್ತಾನ ಕೈಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ನೀಡಿದ ಮಲಿಕ್, 101 ಸಾಕ್ಷಿಗಳ ಹೇಳಿಕೆಗಳನ್ನು ದಾಖಲು ಮಾಡಲಾಗಿದ್ದು, ಎಲ್ಲ ಪುರಾವೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆಯೆಂದು ನುಡಿದರು.

ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನದ ನಿಷ್ಕ್ರಿಯತೆಗೆ ಸಾಕ್ಷ್ಯಾಧಾರಗಳ ಕೊರತೆಯೇ ಕಾರಣವೆಂದು ಅವರು ನುಡಿದರು. ಸಯೀದ್ ವಿರುದ್ಧ ಕಾನೂನು ಕ್ರಮಕ್ಕೆ ನಮಗೆ ಹೆಚ್ಚಿನ ಸಾಕ್ಷ್ಯಗಳು ಬೇಕೆಂದು ಹೇಳಿದರು. 'ಭಾರತವು ನಾವು ನಡೆಸುತ್ತಿರುವ ತನಿಖೆಗೆ ಗೌರವ ಕೊಡಬೇಕು. ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಅತ್ಯಂತ ಪ್ರಾಮಾಣಿಕವಾಗಿದೆಯೆಂದು' ತಿಳಿಸಿದರು.

ಇದಕ್ಕೆ ಮುಂಚೆ ಮಲಿಕ್ ಭಾರತೀಯ ಹೈಕಮೀಷನ್‌ನ ಶರತ್ ಸಬರವಾಲ್ ಅವರಿಗೆ ಮುಂಬೈ ದಾಳಿಗಳ ಕುರಿತು ಪಾಕಿಸ್ತಾನದ ತನಿಖೆಯ ಪ್ರಗತಿಯನ್ನು ವಿವರಿಸಿ, ಘಟನೆಗೆ ಕಾರಣಕರ್ತರಿಗೆ ಶಿಕ್ಷೆ ವಿಧಿಸುವ ಸರ್ಕಾರದ ಬದ್ಧತೆಯನ್ನು ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ