ಆಧುನಿಕ ಚೀನಾ ನಿರ್ಮಾಣದ ಮೇಲೆ ಗಾಢ ಪ್ರಭಾವ ಬೀರಿದ ಅತ್ಯಂತ 60 ಪ್ರಭಾವಿ ವಿದೇಶಿ ನಾಯಕರ ಪಟ್ಟಿಯಲ್ಲಿ ಜವಾಹರ್ ಲಾಲ್ ನೆಹರೂ ಮತ್ತು ರವೀಂದ್ರನಾಥ ಟ್ಯಾಗೋರ್ ಅವರೂ ಜಾಗತಿಕವಾಗಿ ಸ್ಥಾನ ಪಡೆದಿದ್ದಾರೆ.
ಚೀನಾ ಜಾಗತಿಕ ಮಟ್ಟದಲ್ಲಿ ಒಂದು ಅತ್ಯುತ್ತಮ ಸ್ವರೂಪ ಪಡೆಯಲು ಈ ಇಬ್ಬರು ನಾಯಕರು ಚೀನಿಯರ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಉದ್ದೇಶಪೂರ್ವಕವಾಗಿಯೋ, ಆಕಸ್ಮಿಕವಾಗಿಯೊ ಅಥವಾ ಪರೋಕ್ಷವಾಗಿಯೋ, ಇಲ್ಲವೇ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಇವರ ಪ್ರಭಾವ ಆಧುನಿಕ ಚೀನಾದ ಕನಸು ಕಂಡ 120 ಕೋಟಿ ಚೀನಿಯರ ಮೇಲೆ ಪ್ರಭಾವ ಉಂಟು ಮಾಡಿದೆ ಎಂದು ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
ಪಟ್ಟಿಯಲ್ಲಿ ನೆಹರೂ ಅವರಿಗೆ 19ನೇ ಸ್ಥಾನ ಲಭಿಸಿದ್ದರೆ, ಟ್ಯಾಗೋರ್ 11ನೇ ಸ್ಥಾನದಲ್ಲಿದ್ದಾರೆ. ಟ್ಯಾಗೋರ್ ಅವರು ಇಡೀ ಪಟ್ಟಿಯಲ್ಲಿ ಜಾಗ ಪಡೆದಿರುವ ಏಕೈಕ ಕವಿಯಾಗಿದ್ದಾರೆ. ಬ್ರಿಟನ್‌ನ ಉಕ್ಕಿನ ಮಹಿಳೆ ಎಂದೇ ಹೆಸರು ಪಡೆದಿರುವ ಮಾರ್ಗರೆಟ್ ಥ್ಯಾಚರ್ ಅವರು 60 ಜನರಲ್ಲಿ ಸ್ಥಾನ ಪಡೆದಿರುವ ಏಕೈಕ ಮಹಿಳೆ ಎಂಬುದು ವಿಶೇಷ.