ಇಸ್ಲಾಮಾಬಾದ್, ಭಾನುವಾರ, 20 ಸೆಪ್ಟೆಂಬರ್ 2009( 16:49 IST )
ಜಮ್ಮು ಕಾಶ್ಮೀರದಲ್ಲಿ 1990ರ ದಶಕದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದ ಉಗ್ರಗಾಮಿ ಕಮಾಂಡರ್ ಇಲಿಯಾಸ್ ಕಾಶ್ಮೀರಿ 2000ದಲ್ಲಿ ಭಾರತೀಯ ಸೇನಾಧಿಕಾರಿಯ ಗಂಟಲು ಸೀಳಿದ ಸಾಹಸಕ್ಕಾಗಿ ಪರ್ವೇಜ್ ಮುಷರಫ್‌ರಿಂದ ಬಹುಮಾನಿತನಾಗಿದ್ದನೆಂದು ತಿಳಿದುಬಂದಿದೆ.
ಉತ್ತರ ವಾಜಿರಿಸ್ತಾನದಲ್ಲಿ ಕಳೆದ ವಾರ ಡ್ರೋನ್ ದಾಳಿಗೆ ಹರ್ಕತ್ ಉಲ್ ಜೆಹಾದ್ ಅಲ್ ಇಸ್ಲಾಮಿ ಕಮಾಂಡರ್ ಕಾಶ್ಮೀರಿ ಬಲಿಯಾಗಿದ್ದಾನೆ. ಪಾಕಿಸ್ತಾನ ಸೇನೆಯ ಕಮಾಂಡೊ ಘಟಕದಲ್ಲಿ ಕೂಡ ಅವನು ಸೇವೆ ಸಲ್ಲಿಸಿದ್ದು, ರಷ್ಯಾ ಸೇನೆ ವಿರುದ್ಧ ಹೋರಾಡುವ ಆಫ್ಘನ್ ಮುಜಾಹಿದ್ದೀನ್‌ಗಳಿಗೆ ತರಬೇತಿ ನೀಡಲು ಅವನನ್ನು ನಿಯೋಜಿಸಲಾಗಿತ್ತು.
2000ದ ಫೆಬ್ರವರಿ 26ರಲ್ಲಿ ಸುಮಾರು 25 ಉಗ್ರರೊಂದಿಗೆ ಎಲ್‌ಒಸಿ ದಾಟಿದ ಬಳಿಕ ನಾಯಕಲ್ ವಲಯದಲ್ಲಿ ಭಾರತೀಯ ಸೇನೆ ವಿರುದ್ಧ ಕಾಶ್ಮೀರಿ ಗೆರಿಲ್ಲಾ ಕಾರ್ಯಾಚರಣೆ ನಡೆಸಿದ್ದ. ಬಂಕರ್‌ವೊಂದನ್ನು ಸುತ್ತುವರಿದ ಅವನು ಅದರೊಳಕ್ಕೆ ಗ್ರೆನೇಡ್‌ಗಳನ್ನು ಎಸೆದಿದ್ದ.