ವಾಷಿಂಗ್ಟನ್, ಸೋಮವಾರ, 21 ಸೆಪ್ಟೆಂಬರ್ 2009( 13:13 IST )
ಭಾರತೀಯ ಮೂಲದ ಕನಿಷ್ಠ 9 ಜನರು ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದು, ಕೆಲವರು ಒಂದು ವರ್ಷಕ್ಕೆ ಒಂದು ಲಕ್ಷ ಅಮೆರಿಕ ಡಾಲರ್‌ಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆಂದು ತಿಳಿದುಬಂದಿದೆ. ಅಧ್ಯಕ್ಷ ಬರಾಕ್ ಒಬಾಮಾ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳಲ್ಲಿ ಈ ವಿಷಯ ಬಹಿರಂಗವಾಗಿದೆ.
ಶ್ವೇತಭವನದ ಅಂಕಿಅಂಶದ ಪ್ರಕಾರ, ಅಮೆರಿಕದ ಅಧ್ಯಕ್ಷರಿಗೆ ಉಪಸಹಾಯಕರಾಗಿರುವ ಮತ್ತು ಸೋಷಿಯಲ್ ಇನ್ನೊವೇಷನ್ ಕಚೇರಿ ನಿರ್ದೇಶಕ ಸೊನಾಲ್ ಶಾ ಅವರು ವಾರ್ಷಿಕ 120,000 ಡಾಲರ್ ವೇತನ ಪಡೆಯುತ್ತಿದ್ದಾರೆ. ವಿಶೇಷ ಯೋಜನೆಗಳ ನಿರ್ದೇಶಕ ರಚನಾ ಬೋಮಿಕ್ ಮತ್ತು ವಿಶೇಷ ಯೋಜನೆಗಳು ಮತ್ತು ಸಿಬ್ಬಂದಿ ಮುಖ್ಯಸ್ಥರ ವಿಶೇಷ ಸಹಾಯಕ ಆದಿತ್ಯ ಕುಮಾರ್ ಅವರಿಗೆ ತಲಾ ವಾರ್ಷಿಕ 99.000 ಡಾಲರ್ ವೇತನ ಸಿಗುತ್ತಿದೆ.
90,000 ಗಡಿಗಿಂತ ಕೆಳಕ್ಕೆ ವೇತನ ಪಡೆಯುತ್ತಿರುವ ಭಾರತೀಯ ಮೂಲದ ಜನರಲ್ಲಿ ಅನಿಶಾ ಗುಪ್ತಾ ಕೌನ್ಸಲ್ ಕೆಲಸ ಮಾಡುತ್ತಿದ್ದು, ವಾರ್ಷಿಕ 86.927 ಡಾಲರ್, ರೆಸ್ಪಾನ್ಸ್ ನೀತಿಯ ನಿರ್ದೇಶಕ ಪ್ರದೀಪ್ ರಾಮಮೂರ್ತಿ ಒಟ್ಟು ವೇತನ 86,927 ಡಾಲರ್.
ಶ್ವೇತಭವನದ ಬ್ಲಾಗ್‌ನಲ್ಲಿ ಪ್ರಕಟಿಸಿದ ಅಂಕಿಅಂಶಗಳಲ್ಲಿ ನೀತಿ ನಿರ್ದೇಶಕಿ ಕವಿತಾ ಪಟೇಲ್ ವಾರ್ಷಿಕ 65,000 ಗಳಿಸುತ್ತಿದ್ದು, ಶ್ವೇತ ಭವನದ ಮಂಡಳಿಗೆ ವಿಶೇಷ ಸಹಾಯಕ ಶೋಮಿಕ್ ದತ್ತಾ 62,000 ಡಾಲರ್ ಸಂಪಾದಿಸುತ್ತಿದ್ದಾರೆ.ಶ್ವೇತಭವನದ ನೀತಿ ಸಲಹೆಗಾರ ಮನಾಶಿ ದೇಶಪಾಂಡೆ 54,000 ಅಮೆರಿಕ ಡಾಲರ್, ತಾರಾ ರಂಗರಾಜನ್ ಉಪ ಸಹಾಯಕ ನಿರ್ದೇಶಕಿಯಾಗಿ 40,000 ಡಾಲರ್ ಗಳಿಸುತ್ತಿದ್ದಾರೆ.