ವಾಯವ್ಯ ಪಾಕಿಸ್ತಾನದಲ್ಲಿ ಪ್ರಾದೇಶಿಕ ಶಿಕ್ಷಣ ಸಚಿವರನ್ನು ಹತ್ಯೆ ಮಾಡುವ ಪ್ರಯತ್ನವನ್ನು ಪೊಲೀಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಶಿಕ್ಷಣ ಸಚಿವರ ಹತ್ಯೆಗೆ ಯೋಜಿಸಿದ್ದ ನಾಲ್ವರು ಉಗ್ರಗಾಮಿಗಳ ಜತೆ ಗುಂಡಿನ ಚಕಮಕಿ ಬಳಿಕ ಅಪ್ರಾಪ್ತ ವಯಸ್ಕ ಆತ್ಮಾಹುತಿ ಬಾಂಬರ್ ಸ್ವತಃ ಸ್ಫೋಟಿಸಿಕೊಂಡನೆಂದು ಪೊಲೀಸರು ಹೇಳಿದ್ದಾರೆ. ವಾಯವ್ಯ ಪ್ರಾಂತ್ಯದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯರಾತ್ರಿ ಬಳಿಕ ಉಗ್ರಗಾಮಿಗಳು ಕಲೆತಿದ್ದಾರೆಂದು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿದಾರನೊಬ್ಬ ಸುಳಿವು ನೀಡಿದ.
ಪ್ರಾಂತೀಯ ಶಿಕ್ಷಣ ಸಚಿವ ಸರ್ದಾರ್ ಹುಸೇನ್ ಬಾಬಕ್ ಹತ್ಯೆಗೆ ಉಗ್ರಗಾಮಿಗಳು ಯೋಜಿಸಿದ್ದು, ಸರ್ಕಾರಿ ನೆಲೆಗಳು ಮತ್ತು ಭದ್ರತಾಪಡೆಗಳ ಮೇಲೆ ದಾಳಿಗೆ ಸಂಚು ನಡೆಸಿದ್ದರೆಂದು ಪೊಲೀಸ್ ಅಧಿಕಾರಿ ನೂರ್ ಜಮಾಲ್ ಖಾನ್ ತಿಳಿಸಿದ್ದಾರೆ.ಪೊಲೀಸರು ಉಗ್ರಗಾಮಿಗಳನ್ನು ಅಡ್ಡಗಟ್ಟಿದ್ದರಿಂದ ಗುಂಡಿನಚಕಮಕಿ ನಡೆಯಿತು.
ಅಷ್ಟರಲ್ಲಿ ಭಾರೀ ಸ್ಫೋಟವೊಂದು ಕಟ್ಟಡವನ್ನು ಅಪ್ಪಳಿಸಿತು ಮತ್ತು ಗಾಯಗೊಂಡ ವ್ಯಕ್ತಿ ಸೇರಿದಂತೆ ಮೂವರು ಪರಾರಿಯಾದರೆಂದು ಖಾನ್ ಟಟಾಲಾಯಿ ಜಿಲ್ಲೆಯಿಂದ ತಿಳಿಸಿದ್ದಾರೆ. ಸ್ಫೋಟಿಸಿಕೊಂಡ ಆತ್ಮಾಹುತಿ ಬಾಂಬರ್‌ನ ದೇಹದ ಅವಯವಗಳನ್ನು ನಾವು ಸಂಗ್ರಹಿಸಿದ್ದು, ಅವುಗಳನ್ನು ಗುರುತಿಸುವ ಉದ್ದೇಶಕ್ಕೆ ಕಳಿಸಲಾಗಿದೆಯೆಂದು ಖಾನ್ ಹೇಳಿದ್ದಾರೆ.