ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿ ಆತ್ಮಹತ್ಯೆ (Indian | Anita Nair | Australia | Suicide)
 
ಕೆಲಸ ಸಿಗದೇ ತೀವ್ರ ಖಿನ್ನತೆಗೊಳಗಾಗಿದ್ದ ಭಾರತೀಯ ವಿದ್ಯಾರ್ಥಿಯೊಬ್ಬ ತನ್ನ ಕೋಣೆಯಲ್ಲಿ ನೇಣಿನ ಕುಣಿಕೆಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಸ್ಟ್ರೇಲಿಯಲ್ಲಿ ಸಂಭವಿಸಿದೆ. 20ರ ಪ್ರಾಯದ ಆಸುಪಾಸಿನಲ್ಲಿದ್ದ ಗುರ್ಜೀಂದರ್ ಸಿಂಗ್ ಇಲ್ಲಿಗೆ 3 ತಿಂಗಳ ಹಿಂದೆ ಆಗಮಿಸಿದ್ದು, ಲಾ ಟ್ರೋಬೆ ವಿಶ್ವವಿದ್ಯಾಲಯದ ಅಕೌಂಟಿಂಗ್ ವಿದ್ಯಾರ್ಥಿಯಾಗಿದ್ದ.

ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಿಂಸಾಚಾರದ ಘಟನೆಗಳು ನಡೆಯುತ್ತಿರುವ ವಿರುದ್ಧ ಭಾರತೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ನಡುವೆ ಈ ಪ್ರಕರಣ ವರದಿಯಾಗಿದೆ. ಏತನ್ಮಧ್ಯೆ ಸಿಂಗ್ ಸಾವಿಗೆ ಕಾರಣ ಇನ್ನೂ ದೃಡಪಟ್ಟಿಲ್ಲವೆಂದು ಮೆಲ್ಬೋರ್ನ್ ಭಾರತೀಯ ಕೌನ್ಸಲ್ ಜನರಲ್ ಅನಿತಾ ನಾಯರ್ ತಿಳಿಸಿದ್ದಾರೆ. ಸಿಂಗ್ ಬಂಧುಗಳಿಗೆ ಅವನ ಸಾವಿನ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವನ ದೇಹವನ್ನು ಸ್ವೀಕರಿಸಲು ಆಸ್ಟ್ರೇಲಿಯಕ್ಕೆ ಆಗಮಿಸಲಿದ್ದಾರೆ.

ಸಿಂಗ್ ಆತ್ಮಹತ್ಯೆ ಹತಾಶೆಯ ಕ್ರಮವೆಂದು ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ಸಂಸ್ಥಾಪಕ ಗೌತಂ ಗುಪ್ತಾ ಹೇಳಿದ್ದಾರೆ. ಇದು ಆಸ್ಟ್ರೇಲಿಯದ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ದುರ್ದೈವಿ ಸಾವಿಗೆ ವಿಕ್ಟೋರಿಯ ಪ್ರಧಾನಿ ಜಾನ್ ಬ್ರಂಬಿ ವೈಯಕ್ತಿಕ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯದಲ್ಲಿ ಶಿಕ್ಷಣ ಮುಂದುವರಿಕೆಗೆ ಹಣ ಸಂಪಾದಿಸಲು ಕೆಲಸಕ್ಕಾಗಿ ಹುಡುಕಿದ ಸಿಂಗ್ ಕೆಲಸ ಸಿಗದೇ ತೀವ್ರ ಹತಾಶನಾಗಿ ಅತಿರೇಕದ ಕ್ರಮಕ್ಕೆ ಇಳಿದನೆಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ