ವಾಷಿಂಗ್ಟನ್, ಮಂಗಳವಾರ, 22 ಸೆಪ್ಟೆಂಬರ್ 2009( 13:21 IST )
ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಅಮೆರಿಕದ ಸಹವರ್ತಿ ವಿಲಿಯಂ ಬರ್ನ್ಸ್ ಅವರನ್ನು ಭೇಟಿ ಮಾಡಿ, ಭಯೋತ್ಪಾದನೆ ನಿಗ್ರಹ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ನವೆಂಬರ್‌ನಲ್ಲಿ ಅಮೆರಿಕಕ್ಕೆ ಉದ್ದೇಶಿತ ಭೇಟಿ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ವಿಶಾಲ ವ್ಯಾಪ್ತಿಯ ಮಾತುಕತೆ ನಡೆಸಿದರು.
ಭಾನುವಾರ ತಡವಾಗಿ ನ್ಯೂಯಾರ್ಕ್‌ನಿಂದ ಇಲ್ಲಿಗೆ ಆಗಮಿಸಿದ ನಿರುಪಮಾ ರಾವ್ ಅಮೆರಿಕದ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಬರ್ನ್ಸ್ ಜತೆ ವಿವರವಾದ ಮಾತುಕತೆ ನಡೆಸಿದರು.
ಕಳೆದ ಜುಲೈನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಭೇಟಿ ಮತ್ತು ನವೆಂಬರ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕ ಭೇಟಿಗೆ ಸಿದ್ಧತೆ ಹಿನ್ನೆಲೆಯಲ್ಲಿ ಭಾರತ-ಅಮೆರಿಕ ಮಾತುಕತೆಯ ವಿನ್ಯಾಸ ಕುರಿತು ಉಭಯ ರಾಜತಾಂತ್ರಿಕರು ಪರಾಮರ್ಶೆ ನಡೆಸಿದರೆಂದು ಮೂಲಗಳು ಹೇಳಿವೆ. ಬರ್ನ್ಸ್ ಆಮಂತ್ರಣದ ಮೇಲೆ ರಾವ್ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದಾರೆ.