ರಷ್ಯಾದ ಪ್ರಖ್ಯಾತ ಕಲಾಶ್ನಿಕೋವ್ ಬಂದೂಕುಗಳ ತಯಾರಕ ಕಂಪೆನಿ ಇಝ್ಮಾಶ್ ಸಾಲಗಳನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ದಿವಾಳಿ ಎದುರಿಸುತ್ತಿದೆ. ಇಝ್ಮಾಶ್ ನೆಲೆಹೊಂದಿರುವ ಉಡ್‌ಮುರ್ಟಿಯದ ಉರಾಲ್ಸ್ ಪ್ರದೇಶದ ಪಂಚಾಯಿತಿ ಕೋರ್ಟ್ ರಷ್ಯಾದ ವಿಶ್ವವಿಖ್ಯಾತ ಕಲಾಶ್ನಿಕೋವ್ ಪ್ರಹಾರ ಬಂದೂಕುಗಳ ಉತ್ಪಾದಕರ ವಿರುದ್ಧ ದಿವಾಳಿ ದಾವೆ ನಡೆಸಲು ಒಪ್ಪಿಕೊಂಡಿದೆಯೆಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.
ಹಿಂದಿನ ಅಜ್ಞಾತ ಕಂಪೆನಿ ಗ್ರೆಮಿಕಾ ಈ ದಾವೆಯನ್ನು ಹೂಡಿದೆಯೆಂದು ಕೋರ್ಟ್ ತಿಳಿಸಿದೆ. ಕಲಾಶ್ನಿಕೋವ್ ಘಟಕದ ಮಾಲೀಕ ಮತ್ತು ಫಿರ್ಯಾದಿದಾರನ ನಡುವೆ ಯಾವ ರೀತಿಯ ಸಂಪರ್ಕವಿದೆಯೆಂದು ಅದು ತಿಳಿಸಿಲ್ಲ. ಅಕ್ಟೋಬರ್ 7 ರಂದು ದಾವೆಯ ವಿಚಾರಣೆ ನಡೆಯಲಿದೆಯೆಂದು ಕೋರ್ಟ್ ತಿಳಿಸಿದೆ. ಇಝ್ಮಾಶ್ ಗ್ರೆಮಿಕಾಗೆ ಸುಮಾರು 400 ದಶಲಕ್ಷ ರೂಬಲ್ ಸಾಲನೀಡಬೇಕಿದೆಯೆಂದು ಇಝ್ಮಾಶ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಇಝ್ಮಾಶ್‌ನಲ್ಲಿ ಮೈಕೇಲ್ ಕಲಾಶ್ನಿಕೋವ್ 1840ರಲ್ಲಿ ಎಕೆ-47 ಶೋಧಿಸಿದ್ದು, ಇಝ್ಮಾಶ್ ರಷ್ಯನ್ ಟೆಕ್ನಾಲಜೀಸ್ ಘಟಕವಾಗಿದೆ.ಇಝ್ಮಾಶ್ ಮೊಲೊಟ್ ಕಾರ್ಖಾನೆಯ ಮಾಲೀಕತ್ವ ಹೊಂದಿದ್ದು, ಪ್ರಹಾರ ಬಂದೂಕುಗಳನ್ನು ಕಾರ್ಖಾನೆ ತಯಾರಿಸುತ್ತದೆ. ಈಗಾಗಲೇ ಬಂದೂಕುಗಳಿಗೆ ಬೇಡಿಕೆ ಕೊರತೆಯಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.