ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೈಟ್‌ಹೌಸ್ ಹೊರಗೆ ಯೆಲ್ಸಿನ್‌ರ ಗುಂಡಿನ ಗಮ್ಮತ್ತು (Yeltsin | White House | London | Drunk)
 
ರಷ್ಯಾದ ಮಾಜಿ ಅಧ್ಯಕ್ಷ ಬೋರಿಸ್ ಯೆಲ್ಸಿನ್ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದಾಗ ಗುಂಡಿನ ಮತ್ತಿನಲ್ಲಿ ತೇಲಾಡುತ್ತಾ ಪಿಜ್ಜಾ ತಿನ್ನುವುದಕ್ಕಾಗಿ ಒಳಚಡ್ಡಿಯಲ್ಲೇ ಟ್ಯಾಕ್ಸಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಸಂಗತಿ ತಿಳಿದುಬಂದಿದೆ. ಯೆಲ್ಸಿನ್ ಅವರ ಕುಡಿತದ ಚಟಗಳ ಬಗ್ಗೆ ಮುಜುಗರದ ವಿವರಗಳನ್ನು ಬಿಲ್ ಕ್ಲಿಂಟನ್ ತಮ್ಮ ಅಧ್ಯಕ್ಷಾವಧಿಯ ಮೌಖಿಕ ಇತಿಹಾಸದಲ್ಲಿ ಬಹಿರಂಗ ಮಾಡಿದ್ದಾರೆ.

ಇತಿಹಾಸಕಾರ ಟೈಲರ್ ಬ್ರಾಂಚ್ ಶ್ವೇತಭವನಕ್ಕೆ ತಡರಾತ್ರಿಯ ಭೇಟಿಗಳನ್ನು ನೀಡಿದ ಸಂದರ್ಭದಲ್ಲಿ 79 ಧ್ವನಿಮುದ್ರಿತ ಸಂದರ್ಶನಗಳ ಆಧಾರದ ಮೇಲೆ ಈ ವಿವರಗಳನ್ನು ಕಲೆಹಾಕಲಾಗಿದೆ.ಬ್ಲೇರ್ಸ್ ಹೌಸ್‌ನ ಅಧಿಕೃತ ಪ್ರವಾಸಿಗಳ ನಿವಾಸದ ನೆಲಮಾಳಿಗೆಯಲ್ಲಿ ಕುಡಿದು ತೂರಾಡುತ್ತಿದ್ದ ಯೆಲ್ಸಿನ್ ಅವರನ್ನು ಕಂಡು ಯಾರೋ ನುಸುಳಿದ್ದಾರೆಂದು ಕಾವಲುಗಾರ ತಪ್ಪುತಿಳಿದ.

ಮರುದಿನ ಯೆಲ್ಸಿನ್ ಕಂಠಪೂರ್ತಿ ಕುಡಿತ ಮತ್ತಿನಲ್ಲಿ ಸೀಕ್ರೇಟ್ ಸರ್ವಿಸ್ ಕಣ್ತಪ್ಪಿಸಿದ. ಯೆಲ್ಸಿನ್‌ಗಾಗಿ ಜಾಲಾಡಿದ ಸೀಕ್ರೇಟ್ ಸರ್ವೀಸ್, ಪೆನ್ಸಿಲ್ವೇನಿಯ ಅವೆನ್ಯೂನಲ್ಲಿ ಬರೇ ಒಳಚಡ್ಡಿ ಧರಿಸಿದ್ದ ಯೆಲ್ಸಿನ್ ಟ್ಯಾಕ್ಸಿ ಹಿಡಿಯಲು ಪ್ರಯತ್ನಿಸುತ್ತಿದ್ದನ್ನು ಪತ್ತೆಹಚ್ಚಿದರು. ಯೆಲ್ಸಿನ್‌ನನ್ನು ಈ ಕುರಿತು ಪ್ರಶ್ನಿಸಿದಾಗ, ತಡವರಿಸುತ್ತಾ ತಮಗೆ ಪಿಜ್ಜಾ ಬೇಕೆಂದು ಹೇಳಿದರು. ಯೆಲ್ಸಿನ್ ವಿಷಯ ಹೇಳಿದ್ದಲ್ಲದೇ ಮೊನಿಕಾ ಲೆವೆನ್ಸ್ಕಿ ಜತೆ ತಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾ, ಕ್ಲಿಂಟನ್ ವಿಷಾದ ವ್ಯಕ್ತಪಡಿಸಿದರು.

ವೈಯಕ್ತಿಕ ಮತ್ತು ರಾಜಕೀಯ ಹಿನ್ನೆಡೆ ಸೇರಿದಂತೆ ತಾಯಿಯ ಸಾವು ಮತ್ತು ಕಾಂಗ್ರೆಸ್ ರಿಪಬ್ಲಿಕನ್ಸ್‌ಗೆ ಕಳೆದುಕೊಂಡಿದ್ದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಈಡಾಗಿದ್ದಾಗಿ ಕ್ಲಿಂಟನ್ ಹೇಳಿದ್ದಾರೆ.ಕ್ಲಿಂಟನ್ ಮೋನಿಕಾ ಲೆವೆನ್ಸ್ಕಿ ಜತೆ ಹೊಂದಿದ್ದ ಸಂಬಂಧ ಕೆದಕಲು ಯತ್ನಿಸಿದಾಗ ಅದನ್ನು ದುರ್ಬಳಕೆ ಮಾಡಬಹುದೆಂಬ ಆತಂಕದಲ್ಲಿ ಮೊದಲಿಗೆ ನಿರಾಕರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ