ಇಸ್ಲಾಮಾಬಾದ್, ಮಂಗಳವಾರ, 22 ಸೆಪ್ಟೆಂಬರ್ 2009( 19:26 IST )
ಮುಂಬೈ ಭಯೋತ್ಪಾದನೆ ದಾಳಿಯ ರೂವಾರಿ ಜಮಾತ್ ಉದ್ ದವಾ ಮುಖಂಡ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೆಂಬ ವರದಿಗಳನ್ನು ಖಚಿತಪಡಿಸದೇ ಸಮಯ ವ್ಯರ್ಥಮಾಡುತ್ತಿದ್ದ ಪಾಕಿಸ್ತಾನ ಸರ್ಕಾರ ಕೊನೆಗೂ ಸಯೀದ್ ಗೃಹಬಂಧನ ದೃಢಪಡಿಸಿದೆ.
ಮುಲ್ತಾನ್‌ನಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಪ್ರದಾನಿ ಯುಸುಫ್ ರಾಜಾ ಗಿಲಾನಿ, ಸಯೀದ್ ಬಂಧನ ದೃಢಪಡಿಸುತ್ತಾ, 'ಅವನನ್ನು ಬಂಧಿಸಲಾಗಿದೆ. ನಾವು ಭಾರತದ ಜತೆ ಸಹಕರಿಸಲು ಸಿದ್ಧವಾಗಿದ್ದು, ಎಲ್ಲ ಪ್ರಸಕ್ತ ಸಮಸ್ಯೆಗಳನ್ನು ಪರಿಹರಿಸುವುದಾಗಿಯೂ ಮತ್ತು ಭಯೋತ್ಪಾದಕರು ತಮ್ಮ ಚಟುವಟಿಕೆಗಳಿಗೆ ಪಾಕಿಸ್ತಾನ ನೆಲವನ್ನು ಬಳಸಿಕೊಳ್ಳಲು ಬಿಡುವುದಿಲ್ಲವೆಂದು' ಹೇಳಿದರು.
ಸಯೀದ್ 26/11ರ ಸೂತ್ರಧಾರಿಯಾಗಿದ್ದು ಅವನಿಗೆ ಶಿಕ್ಷೆ ವಿಧಿಸಬೇಕೆಂದು ಭಾರತ ಒತ್ತಾಯಿಸುತ್ತಿದ್ದರೂ, ಜೆಯುಡಿ ಮುಖಂಡನ ವಿರುದ್ಧ ಧ್ವನಿವರ್ಧಕ ದುರ್ಬಳಕೆ ಮಾಡಿ ಜಿಹಾದ್‌ಗೆ ಪ್ರಚೋದನೆ ನೀಡಿದ ಆರೋಪವನ್ನು ಮಾತ್ರ ಹೊರಿಸಲಾಗಿದೆ.