ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್-ಐಎಸ್ಐ ನಂಟಿಂದ ಕಗ್ಗಂಟು: ಕೃಷ್ಣ (New Delhi | Afghan | Washington | Taliban)
 
ತಾಲಿಬಾನ್ ಭಯೋತ್ಪಾದಕತೆಯನ್ನು ಅಡಗಿಸುವ ಪಾತ್ರವನ್ನು ಒಂದು ಕಡೆ ಪಾಕಿಸ್ತಾನ ವಹಿಸಿಕೊಂಡಿದೆ. ಇನ್ನೊಂದು ಕಡೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆಫ್ಘನ್ ತಾಲಿಬಾನ್‌ಗೆ ನೆರವು ನೀಡುತ್ತಿರುವುದರಿಂದ ಆಫ್ಘಾನಿಸ್ತಾನದ ಮಿಲಿಟರಿ ಪರಿಸ್ಥಿತಿ ಜಟಿಲಗೊಂಡಿದೆಯೆಂದು ಭಾರತ ಆರೋಪಿಸಿದೆ.

ತಾಲಿಬಾನ್, ಐಎಸ್‌ಐ ಇನ್ನೂ ಒಟ್ಟಿಗೇ ಕಲೆತಿದ್ದಾರೆಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಪ್ರಮುಖ ಪತ್ರಿಕೆಯೊಂದಕ್ಕೆ ಸಂದರ್ಶನದಲ್ಲಿ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿ ನೇಪಥ್ಯದಲ್ಲಿ ಅವರು ಮೇಲಿನ ಮಾತನ್ನು ನುಡಿದರು. ಇಂಟರ್ ಸರ್ವೀಸಸ್ ಗುಪ್ತಚರ ಸೇವೆ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಜತೆ ನಂಟನ್ನು ಮುರಿಯಲು ಪಾಕಿಸ್ತಾನ ಸರ್ಕಾರ ವಿಫಲವಾಗಿದೆಯೆಂದು ಕೃಷ್ಣ ಹೇಳಿದರು.

ಪಾಕ್‌ನಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕದ ನೆರವನ್ನು ಭಾರತದ ವಿರುದ್ಧ ಸಾಂಪ್ರದಾಯಿಕ ರಕ್ಷಣೆ ಬಲಪಡಿಸಲು ಬಳಸಲಾಯಿತೆಂದು ಮುಷರಫ್ ಇತ್ತೀಚೆಗೆ ಹೇಳಿಕೆ ನೀಡಿದ ಬಳಿಕ ಭಾರತ ಈ ಕುರಿತು ಮಾಡಿದ್ದ ಆರೋಪಕ್ಕೆ ಸಮರ್ಥನೆಯಾಗಿದೆಯೆಂದು ಕೃಷ್ಣ ಹೇಳಿದರು. ನೀವು ಪಾಕಿಸ್ತಾನಕ್ಕೆ ನೀಡುವ ನೆರವನ್ನು ಭಾರತದ ವಿರುದ್ಧ ದುರ್ಬಳಕೆ ಮಾಡದಂತೆ ಖಾತರಿ ಮಾಡಿಕೊಳ್ಳಿ ಎಂದು ನಮ್ಮ ಸ್ನೇಹಿತರಿಗೆ ನಾವು ಸದಾ ಎಚ್ಚರಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ