ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಕ್ಕಳಿಗೆ ಇರಿದು ಹತ್ಯೆ: ಎನ್‌ಆರ್‌ಐಗೆ 31 ವರ್ಷ ಜೈಲು (Indian | Britain | Baker | NRI woman)
 
ತನ್ನ ಅಪ್ರಾಪ್ತ ಮಕ್ಕಳಿಬ್ಬರನ್ನು ಚೂರಿಯಿಂದ ಇರಿದು ನಿರ್ದಯವಾಗಿ ಹತ್ಯೆ ಮಾಡಿದ ಭಾರತೀಯ ಮ‌ೂಲದ ಮಹಿಳೆಗೆ ಕನಿಷ್ಠ 33 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ. ಬ್ರಿಟನ್ ಆಧುನಿಕ ಯುಗದಲ್ಲಿ ಇದೊಂದು ಸುದೀರ್ಘಾವಧಿಯ ಶಿಕ್ಷೆಯೆಂದು ಭಾವಿಸಲಾಗಿದೆ. 41ವ ವರ್ಷವಯಸ್ಸಿನ ರೇಖಾ ಕುಮಾರಿ ಬೇಕರ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶ ಡೇವಿಡ್ ಬೀನ್, ಮಹಿಳೆಗೆ ಎರಡು ಕಡ್ಡಾಯ ಜೀವಾವಧಿಗಳನ್ನು ಹೇರಿದ್ದಾರೆ.

ಪೆರೋಲ್ ಮಂಡಳಿ 2040ರವರೆಗೆ ಆಕೆಯನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲನೆ ಮಾಡುವುದಿಲ್ಲವೆಂದು ನುಡಿದಿದೆ. 2007ರಲ್ಲಿ ಹತ್ಯೆ ಮಾಡಿದ್ದ ಅವಳು ಈಗಾಗಲೇ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾಳೆ.ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಕುಮಾರಿ ಬೇಕರ್, ತನ್ನ ಇಬ್ಬರು ಪುತ್ರಿಯರು ನಿದ್ರಾವಸ್ಥೆಯಲ್ಲಿದ್ದಾಗಲೇ ಹತ್ಯೆ ಮಾಡಿದ್ದಳು. ಹಿರಿಯ ಸೋದರಿ 16 ವರ್ಷ ವಯಸ್ಸಿನ ಡೇವಿನಾ ಬೇಕರ್‌ಳನ್ನು 39 ಬಾರಿ ತಿವಿದಿದ್ದು, ಆಕೆಯ ಸೋದರಿ ಜಸ್ಮೈನ್ ಬೇಕರ್‌ನನ್ನು 29 ಬಾರಿ ಅಡುಗೆಮನೆಯ ಚೂರಿಯಿಂದ ಇರಿದು ಕುಮಾರಿ ಬೇಕರ್ ಹತ್ಯೆ ಮಾಡಿದ್ದಳು.

ಸ್ವತಃ ತಾಯಿಯೇ ಮಕ್ಕಳನ್ನು ಹತ್ಯೆ ಮಾಡಿದ್ದನ್ನು ಅನೇಕ ಜನರು ಊಹಿಸಲಾಗದ ಸಂಗತಿ ಎಂದು ಭಾವಿಸಿದ್ದಾರೆಂದು ನ್ಯಾಯಾಧೀಶರು ತಿಳಿಸಿದರು.ಇದಕ್ಕೆ ಮುಂಚೆ ಸ್ಟ್ರೆಥಾಮ್‌ನಲ್ಲಿದ್ದ ಮನೆಯಲ್ಲಿ ಪುತ್ರಿ ಡೆವಿನಾಗೆ ಮೊದಲಿಗೆ ಇರಿಯಲಾಗಿತ್ತು. ಬಾಲಕಿಯ ದೇಹದಲ್ಲಿ ಗಾಯದ ಗುರುತುಗಳಿರುವುದು ಆಕೆ ಸೆಣೆಸಿದ್ದರ ಗುರುತೆಂದು ಹೇಳಲಾಗಿದೆ. ಜಸ್ಮೈನ್ ಸಹ ಇದೇ ರೀತಿಯಲ್ಲಿ ಸತ್ತಿದ್ದಳು.

ದಾಳಿಗೆ ಎರಡು ದಿನದ ಮುಂಚೆ ಕುಮಾರಿ ಬೇಕರ್ ಚೂರಿಗಳನ್ನು ತಂದಿರಿಸಿದ್ದಳು. ಮಕ್ಕಳನ್ನು ತಡರಾತ್ರಿಯ ಶಾಪಿಂಗ್‌ಗೆ ಕರೆದು ತೀವ್ರ ಆಯಾಸಗೊಂಡಿದ್ದ ಅವರಿಬ್ಬರು ಪ್ರತಿಭಟಿಸುವುದಿಲ್ಲವೆಂಬ ಖಾತ್ರಿಯೊಂದಿಗೆ ಚೂರಿಯಿಂದ ಇರಿದು ಕೊಂದಿದ್ದಳು. ಕುಮಾರಿ ಬೇಕರ್ ಪತಿ ಡೇವಿಡ್ ಬೇಕರ್ ಪುತ್ರಿಯರ ಸಾವಿನಿಂದ ತಮಗೆ ಎಣಿಸಲಾಗದಷ್ಟು ನಷ್ಟ ಉಂಟಾಗಿದೆಯೆಂದು ಹೇಳಿದ್ದರು. ತನ್ನ ವಿಚ್ಛೇದಿತ ಪತಿಯ ಹೊಸ ಸಂಬಂಧ ಮತ್ತು ತನ್ನ ಹೊಸ ಗೆಳೆಯನ ಜತೆ ಸಂಬಂಧ ಮುರಿದಿದ್ದರಿಂದ ತೀವ್ರ ಕ್ಷೋಬೆಗೀಡಾಗಿ ಹತ್ಯೆ ಮಾಡಿದ್ದಾಗಿ ಕುಮಾರಿ ಬೇಕರ್ ತಿಳಿಸಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೇಕರ್, ಬ್ರಿಟನ್, ರೇಖಾ, ಭಾರತೀಯ