ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರ ದಮನದ ವೆಚ್ಚ ಹಿಂತಿರುಗಿಸಿ: ಜರ್ದಾರಿ (Zardari | New York | Pakistan | Extremism)
 
ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರವಾದದ ವಿರುದ್ಧ ಹೋರಾಟದಲ್ಲಿ ನಾವು ಖರ್ಚು ಮಾಡಿದ 1.6 ಶತಕೋಟಿ ಡಾಲರ್ ಹಣವನ್ನು ತುಂಬುವಂತೆ ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಅಮೆರಿಕಕ್ಕೆ ಒತ್ತಾಯಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಆಫ್ಘನ್-ಪಾಕ್ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಅಮೆರಿಕದ ಅಧಿಕಾರಿಗಳ ಜತೆ ಎರಡು ಪ್ರತ್ಯೇಕ ಭೇಟಿಗಳಲ್ಲಿ ಜರ್ದಾರಿ ಮೇಲಿನ ಒತ್ತಾಯ ಮಾಡಿದ್ದಾರೆಂದು ಡಾನ್‌ನ್ಯೂಸ್ ವರದಿಮಾಡಿದೆ.

ಉಗ್ರಗಾಮಿಗಳ ನಿಗ್ರಹ ಕಾರ್ಯಾಚರಣೆಗೆ ಅಮೆರಿಕವು ವಿಶೇಷ ಖಾತೆಯಾದ ಸಮ್ಮಿಶ್ರ ಬೆಂಬಲ ನಿಧಿಯಿಂದ ಪಾಕಿಸ್ತಾನಕ್ಕೆ ಪಾವತಿ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ಯಾವುದೇ ಪಾವತಿ ಮಾಡಿಲ್ಲ.

ಟೋಕಿಯೊ ದಾನಿಗಳ ಸಮಾವೇಶದಲ್ಲಿ ಪಾಕ್ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ 6 ಶತಕೋಟಿ ಡಾಲರ್ ನೀಡುವ ವಾಗ್ದಾನವನ್ನು ಈಡೇರಿಸುವಂತೆ ಕೂಡ ಜರ್ದಾರಿ ಕರೆ ನೀಡಿದ್ದಾರೆ. ಇದರ ಜತೆಗೆ ಕೆರಿ ಲೂಗಾರ್ ಮಸೂದೆಯನ್ನು ಅಳವಡಿಸಿ ವಾರ್ಷಿಕ 1.5 ಶತಕೋಟಿ ಡಾಲರ್ ಸಲ್ಲಿಸುವಂತೆ ಅವರು ಕೋರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ