ಭಾರತದ ಪಾತ್ರವಿಲ್ಲದೇ ಹವಾಮಾನ ಬದಲಾವಣೆ ಕುರಿತು ಯಾವುದೇ ಜಾಗತಿಕ ಒಪ್ಪಂದವಿಲ್ಲವೆಂದು ಐರೋಪ್ಯ ಆಯೋಗದ ಅಧ್ಯಕ್ಷ ಜೋಸ್ ಮ್ಯಾನುಯಲ್ ಬರೋಸೊ ತಿಳಿಸಿದ್ದಾರೆ. ಭಾರತವಿಲ್ಲದೇ ನಾವು ಒಪ್ಪಂದ ಕುದುರಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ತಾವು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಭಾರತದ ಉನ್ನತ ನಾಯಕರ ಜತೆ ಸತತ ಸಂಪರ್ಕದಲ್ಲಿರುವುದಾಗಿ ಹೇಳಿದರು.
ಭಾರತವು ಜನಸಂಖ್ಯಾ ವಿಜ್ಞಾನದ ಆಧಾರದ ಮೇಲೆ ವಿಶ್ವದಲ್ಲೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಭಾರತ ಮತ್ತು ಚೀನಾವಿಲ್ಲದ ಜಾಗತಿಕ ಒಪ್ಪಂದದಲ್ಲಿ ಯಾವುದೇ ಅರ್ಥವಿಲ್ಲವೆಂದು ಅವರು ಹೇಳಿದ್ದಾರೆ.
ನ್ಯೂಯಾರ್ಕ್ ಮೂಲದ ಚಿಂತಕ ಚಾವಡಿಯಾದ ವಿದೇಶಾಂಗ ಸಂಬಂಧ ಮಂಡಳಿಯ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಅವರು ಮೇಲಿನಂತೆ ತಿಳಿಸಿದರು.