ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಯೀದ್ ವಿರುದ್ಧ ಸಾಕ್ಷ್ಯಾಧಾರದ ಮೇಲೆ ಗಿಲಾನಿ ಕ್ರಮ (Mumbai terror | Evidence | Gilani | Saeed)
 
ಮುಂಬೈ ದಾಳಿಯ ಸೂತ್ರಧಾರ ಜಮಾತ್ ಉದ್ ದವಾ ಮುಖಂಡ ಹಫೀಜ್ ಮಹಮದ್ ಸಯೀದ್ ವಿರುದ್ದ ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ. ಮುಲ್ತಾನ್‌ನಲ್ಲಿ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮದ ಜತೆ ಮಾತನಾಡಿದ ಗಿಲಾನಿ, ಸಾಕ್ಷ್ಯಧಾರಕ್ಕೆ ಅನ್ವಯವಾಗಿ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದರಿಂದಾಗಿ ಭಯೋತ್ಪಾದಕ ನಾಯಕನ ವಿರುದ್ಧ ಯಾವುದೇ ದೃಢ ಕ್ರಮಕ್ಕೆ ಇಸ್ಲಾಮಾಬಾದ್ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ. ಸಯೀದ್ ವಿರುದ್ಧ ಎಲ್ಲ ಸಾಕ್ಷ್ಯಾಧಾರಗಳು ಪಾಕಿಸ್ತಾನ ನೆಲದಲ್ಲಿ ಸಿಗುತ್ತದೆಂದು ಗೃಹ ಸಚಿವ ಚಿದಂಬರಂ ಹೇಳಿದ ಬಳಿಕ ಗಿಲಾನಿ ಹೇಳಿಕೆ ಹೊರಬಿದ್ದಿದೆ.

ಚೆನ್ನೈನಲ್ಲಿ ಸೂಪರ್ ಫಾಸ್ಟ್ ರೈಲಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಿದಂಬರಂ, ಪಾಕಿಸ್ತಾನವು ಸಯೀದ್‌ನ 26/11 ಹತ್ಯಾಕಾಂಡದಲ್ಲಿ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ, ಸಯೀದ್, ಗಿಲಾನಿ, ಮುಲ್ತಾನ್