ಜೋಹಾನ್ಸ್ಬರ್ಗ್, ಗುರುವಾರ, 24 ಸೆಪ್ಟೆಂಬರ್ 2009( 10:08 IST )
ಇಸ್ಲಾಂ ಎಂಬ ಪದವು ಭಯೋತ್ಪಾದನೆಗೆ ಪರ್ಯಾಯವಾದ ಪದ ಎಂಬಂತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಅಸಮರ್ಪಕ ಮತ್ತು ಅನುಚಿತ ಎಂದು ಬಾಲಿವುಡ್ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ. ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಐತಿಹಾಸಿಕ ಉತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾದ ಮೂರು ನಗರಗಳಲ್ಲಿ ಬಾಲಿವುಡ್ ನಟಿ ಶಬಾನಾ ಅಜ್ಮಿ ಪ್ರವಾಸ ಕೈಗೊಂಡಿರುವ ಸಂದರ್ಭ ಹೀಗೆ ಹೇಳಿದ್ದಾರೆ.