ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೃಷ್ಣ-ಖುರೇಷಿ ಭೇಟಿಯಲ್ಲಿ ಭಯೋತ್ಪಾದನೆ ಚರ್ಚೆ (Krishna | Terrorism | Qureshi | New York)
 
News Room
NRB
ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು ಪಾಕಿಸ್ತಾನದ ಸಹವರ್ತಿ ಶಾ ಮೆಹಮ‌ೂದ್ ಖುರೇಷಿ ಅವರು ಭಾನುವಾರ ಭೇಟಿಯಾಗಲಿದ್ದು ಈ ಸಂದರ್ಭದಲ್ಲಿ ಭಯೋತ್ಪಾದನೆ ಮುಖ್ಯವಿಷಯವಾಗಿ ಚರ್ಚೆಯಾಗಲಿದೆ. ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯ ನೇಪಥ್ಯದಲ್ಲಿ ಖುರೇಷಿ ಜತೆ ಭೇಟಿಯಲ್ಲಿ ಭಯೋತ್ಪಾದನೆ ಮುಖ್ಯ ವಿಷಯವಾಗಲಿದೆಯೆಂದು ಕೃಷ್ಣ ತಿಳಿಸಿದರು.

26/11 ಮುಂಬೈ ದಾಳಿಗಳ ಬಗ್ಗೆ ಭಾರತ ಕ್ರಮಕ್ಕೆ ಒತ್ತಾಯಿಸುತ್ತಿದ್ದು, ಪಾಕಿಸ್ತಾನ ನೆಲದಲ್ಲಿ ಭಯೋತ್ಪಾದನೆ ಮ‌ೂಲಸೌಲಭ್ಯವನ್ನು ನಾಶಮಾಡಬೇಕೆಂದು ಹೇಳುತ್ತಿದೆ.ಮುಂಬೈ ದಾಳಿಗಳನ್ನು ಕುರಿತು ಪಾಕ್‌ನ ಇತ್ತೀಚಿನ ಪ್ರತಿಕ್ರಿಯೆಯನ್ನು ಭಾರತ ಪರಿಶೀಲನೆ ನಡೆಸುತ್ತಿದೆಯೆಂದು ಕೃಷ್ಣ ಹೇಳಿದರು.ನ್ಯೂಯಾರ್ಕ್‌ನಲ್ಲಿ ಸೆ.27ರಂದು ಉಭಯ ನಾಯಕರು ಭೇಟಿಯಾಗುವ ಸಂದರ್ಭದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯವನ್ನು ಮಾತ್ರ ಮಾತುಕತೆ ನಡೆಯಲಿದೆಯೆಂದು ಭಾರತ ವಿದೇಶಾಂಗ ಸಚಿವಾಲಯದ ಮ‌ೂಲಗಳು ಹೇಳಿವೆ.

ಕೃಷ್ಣ ಅವರಿಗೆ ಗಡಿಯಾಚೆ ಭಯೋತ್ಪಾದನೆ ವಿಷಯ ಮಾತ್ರ ಚರ್ಚಿಸಬೇಕೆಂದು ಸಚಿವಸಂಪುಟ ಸೂಚಿಸಿರುವುದಾಗಿ ಉನ್ನತ ಮಟ್ಟದ ಮ‌ೂಲ ತಿಳಿಸಿದೆ. ಜಮ್ಮುಕಾಶ್ಮೀರದಲ್ಲಿ ನಿಯಂತ್ರಣ ರೇಖೆಯೊಳಕ್ಕೆ ನುಸುಳಲು ಪ್ರಯತ್ನಿಸುವ ಉಗ್ರರ ಹೆಜ್ಜೆಗಳನ್ನು ನಿರ್ಬಂಧಿಸಲು ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಭಾರತ ಸರ್ಕಾರದ ಭಾವನೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ