ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರ ಕೈಗೆ ಅಣ್ವಸ್ತ್ರ ಸಿಗದಂತೆ ಖಾತರಿ: ಒಬಾಮಾ (Obama | Test Ban | Nuclear | Terorrists)
 
ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಅನುಮೋದನೆಯೊಂದಿಗೆ ಮುಂದಡಿ ಇಡುವ ಭರವಸೆ ನೀಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಭಯೋತ್ಪಾದಕರ ಕೈಗೆ ಒಂದೂ ಅಣ್ವಸ್ತ್ರ ಸಾಧನ ಸಿಗದಂತೆ ಅಣ್ವಸ್ತ್ರ ಸಾಧನಗಳ ರಕ್ಷಣೆ ಮಾಡುವ ಬಗ್ಗೆ ಇತರೆ ರಾಷ್ಟ್ರಗಳಿಗೆ ನೆನಪಿಸಿದರು.

ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಚೊಚ್ಚಲ ಭಾಷಣಮಾಡಿದ ಒಬಾಮಾ, ಅಣ್ವಸ್ತ್ರ ಪ್ರಸರಣ ನಿಷೇಧದ ಕರಾರುಗಳಿಗೆ ಬದ್ಧವಾಗಿಲ್ಲದ ರಾಷ್ಟ್ರಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಂದು ಹೇಳಿದ್ದಾರೆ. ಆಯಾ ರಾಷ್ಟ್ರ ಅಣ್ವಸ್ತ್ರ ಸಾಧನಗಳನ್ನು ರಕ್ಷಿಸುವ ಜವಾಬ್ದಾರಿಯ ಬಗ್ಗೆ ಪುನರುಚ್ಚರಿಸಲು ಮತ್ತು ಹಾಗೆ ಮಾಡಲು ಸಾಧ್ಯವಾಗದವರಿಗೆ ಸಹಾಯ ಮಾಡಲು ತಾವು ಮುಂದಿನ ಏಪ್ರಿಲ್‌ನಲ್ಲಿ ಶೃಂಗಸಭೆಯನ್ನು ನಡೆಸುವುದಾಗಿ ಒಬಾಮಾ ಹೇಳಿದರು.

ಹಿಂಸಾವಾದಿ ಉಗ್ರಗಾಮಿಗಳ ಕೈಗೆ ಒಂದೇ ಒಂದೂ ಅಣ್ವಸ್ತ್ರ ಸಾಧನ ಸಿಗಲು ಅವಕಾಶ ನೀಡಬಾರದು ಎಂದು ಒಬಾಮಾ ಹೇಳಿದರು. ನಾವು ಅಣ್ವಸ್ತ್ರ ನಿಷೇಧ ಒಪ್ಪಂದ ಅನುಮೋದನೆಯೊಂದಿಗೆ ಮುಂದಿನ ಹೆಜ್ಜೆಯಿಡುತ್ತೇವೆ ಮತ್ತು ಇತರರೊಂದಿಗೆ ಒಪ್ಪಂದ ಜಾರಿಗೆ ತರಲು ಪ್ರಯತ್ನಿಸುವ ಮ‌ೂಲಕ ಅಣ್ವಸ್ತ್ರ ಪರೀಕ್ಷೆಯ ಶಾಶ್ವತ ನಿಷೇಧ ಮಾಡುವುದಾಗಿ ಒಬಾಮಾ ಹೇಳಿದರು.

ಅಲ್ ಖಾಯಿದಾ ವಿಶ್ವಭದ್ರತೆಗೆ ಇನ್ನೂ ಬೆದರಿಕೆಯೆಂಬ ಅಮೆರಿಕದ ನಿಲುವನ್ನು ಒಬಾಮಾ ಉಚ್ಚರಿಸಿದರು. ಆಫ್ಘಾನಿಸ್ತಾನ ಅಥವಾ ಯಾವುದೇ ರಾಷ್ಟ್ರದಿಂದ ಅಲ್ ಖಾಯಿದಾಗೆ ದಾಳಿ ಮಾಡಲು ನಾವು ಸುರಕ್ಷಿತ ಸ್ವರ್ಗಕ್ಕೆ ಅವಕಾಶ ನೀಡುವುದಿಲ್ಲವೆಂದು ಒಬಾಮಾ ಹೇಳಿದರು. ಪರಮಾಣು ಸಾಧನಗಳ ಪಾತ್ರವನ್ನು ತಗ್ಗಿಸುವ ಅಣ್ವಸ್ತ್ರ ನಿಲುವಿನ ಪರಾಮರ್ಶೆಯನ್ನು ನಾವು ಮುಗಿಸುತ್ತೇವೆ.

ಶಸ್ತ್ರಾಸ್ತ್ರಗಳಿಗೆ ವಿದಳನ ವಸ್ತು ಉತ್ಪಾದನೆ ಅಂತ್ಯಗೊಳಿಸುವ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವಂತೆ ನಾವು ರಾಷ್ಟ್ರಗಳಿಗೆ ಕರೆ ನೀಡುತ್ತೇವೆಂದು ಒಬಾಮಾ ಹೇಳಿದರು. ಇರಾನ್ ಮತ್ತು ಉತ್ತರ ಕೊರಿಯ ಅಣ್ವಸ್ತ್ರ ಕಾರ್ಯಕ್ರಮ ಮುಂದುವರಿಸಿದರೆ ನಾವು ಅವರನ್ನು ಹೊಣೆಯಾಗಿಸುವುದಾಗಿ ಒಬಾಮಾ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ