ಮೆಲ್ಬೋರ್ನ್, ಗುರುವಾರ, 24 ಸೆಪ್ಟೆಂಬರ್ 2009( 13:46 IST )
ಆಸ್ಟ್ರೇಲಿಯದಲ್ಲಿ ಜೋಸೆಫ್ ಫ್ರಿಟ್ಜಲ್ ಮಾದರಿಯ ಇನ್ನೊಂದು ಪ್ರಕರಣ ವರದಿಯಾಗಿದ್ದು, 50 ವರ್ಷ ವಯಸ್ಸಿನ ಪುರುಷನೊಬ್ಬ ಮಕ್ಕಳ ಮೇಲೆ ಕಳೆದ 40 ವರ್ಷಗಳಿಂದ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾನೆಂದು ಆರೋಪಿಸಲಾಗಿದೆ. ಗಿಪ್ಸ್‌ಲ್ಯಾಂಡ್‌ಗೆ ಸೇರಿದ ವ್ಯಕ್ತಿ 10 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದೆ.
1971 ಮತ್ತು 2002ರ ನಡುವೆ ವೊಂಗಾಟಿ ಮತ್ತು ಮೊರ್ವೆಲ್ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯಗಳನ್ನು ನಡೆಸಲಾಗಿದ್ದು, ಇದರಲ್ಲಿ ಅನೇಕ ಮಂದಿ ಬಲಿಪಶುಗಳು ಭಾಗಿಯಾಗಿದ್ದರೆಂದು ವಿಕ್ಟೋರಿಯ ಪೊಲೀಸರು ಬಹಿರಂಗಪಡಿಸಿದ್ದಾರೆ.
ಕಾನೂನುಬಾಹಿರ ಥಳಿತದ ಎರಡು ಪ್ರಕರಣಗಳು, 16 ವರ್ಷಕ್ಕಿಂತ ಕೆಳಗಿನವರ ಜತೆ ಅಶ್ಲೀಲ ವರ್ತನೆಯ 2 ಪ್ರಕರಣಗಳು, 16ಕ್ಕಿ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಅಶ್ಲೀಲ ಕೃತ್ಯದ ಎರಡು ಪ್ರಕರಣಗಳು, ಕೊಲೆ ಬೆದರಿಕೆಯ ಒಂದು ಪ್ರಕರಣ, ಸಾಮಾನ್ಯ ಥಳಿತದ ಎರಡು ಪ್ರಕರಣಗಳು ಸೇರಿವೆ.ಗಿಪ್ಲ್‌ಲ್ಯಾಂಡ್‌ಗೆ ಸೇರಿದ 60ರ ಪ್ರಾಯದ ವ್ಯಕ್ತಿಯೊಬ್ಬ ತನ್ನ ಪುತ್ರಿಯ ಮೇಲೆ 30 ವರ್ಷಗಳವರೆಗೆ ವಿಕೃತ ರೀತಿಯ ಲೈಂಗಿಕ ದೌರ್ಜನ್ಯ ಎಸಗಿ ಆಕೆಯಿಂದ ನಾಲ್ಕು ಮಕ್ಕಳನ್ನು ಪಡೆದಿದ್ದ ತಲ್ಲಣಗೊಳಿಸಿದ ಘಟನೆ ಹಸಿರಾಗಿರುವಾಗಲೇ ಈ ಪ್ರಕರಣ ವರದಿಯಾಗಿದೆ.