ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಬ್ದುಲ್ಲಾ ವಿವಿ ಜತೆ ಐಐಟಿ(ಮುಂಬೈ) ಸಹಯೋಗ (Dubai | Abdullah | Indian Institute | Science)
 
ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯು(ಐಐಟಿ) ನೂತನವಾಗಿ ಆರಂಭಿಸಲಾದ ವಿಜ್ಞಾನ ಮತ್ತು ತಂತ್ರಜ್ಞಾನದ ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯ(ಕಾಸ್ಟ್) ಜತೆ ಸಹಯೋಗ ಹೊಂದಲಿದೆ.

ಕಾಸ್ಟ್ ಉದ್ಘಾಟನೆಗೆ ಭಾರತವನ್ನು ಪ್ರತಿನಿಧಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ನಿಯೋಜಿತರಾದ ರೈಲ್ವೆ ಖಾತೆ ರಾಜ್ಯಸಚಿವ ಈ.ಅಹ್ಮದ್, ತುವಾಲ್‌ನಲ್ಲಿ ಮಾತನಾಡುತ್ತಾ, ವೈಜ್ಞಾನಿಕ ಸಂಶೋಧನೆಯಲ್ಲಿ ಬೃಹತ್ ದಾಪುಗಾಲು ಹಾಕುತ್ತಿರುವ ಸೌದಿಅರೇಬಿಯದ ಬಗ್ಗೆ ಭಾರತಕ್ಕೆ ಹೆಮ್ಮೆಯೆನಿಸಿದ್ದು, ಕಾಸ್ಟ್ ಜತೆ ಇನ್ನಷ್ಟು ಸಂಶೋಧನಾ ಸಂಸ್ಥೆಗಳು ಸಹಯೋಗ ಹೊಂದಲಿದೆಯೆಂದು ತಿಳಿಸಿದರು.

ಇಸ್ಲಾಂ ಜ್ಞಾನಜಗತ್ತಿಗೆ ವಿಪುಲ ಕೊಡುಗೆ ನೀಡಿದ್ದು, ಜಗತ್ತಿನ ಇತರೆ ಭಾಗಗಳಿಗೆ ವಿಜ್ಞಾನದ ಪ್ರಚಾರದಲ್ಲಿ ಮುಸ್ಲಿಂ ವಿಜ್ಞಾನಿಗಳು ಪ್ರಮುಖ ಪಾತ್ರವಹಿಸಿದ್ದಾರೆಂದು ಅವರು ನುಡಿದರು. ರಾಜ ಅಬ್ದುಲ್ಲಾರ ಕನಸಿನ ಯೋಜನೆಯಾದ ಕಾಸ್ಟ್, ಅರಬ್ ಜಗತ್ತಿನಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡಲು ಅನೇಕ ಸಾಂಪ್ರದಾಯಿಕ ನಿರ್ಬಂಧಗಳನ್ನು ಮುರಿದಿದೆಯೆಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ