ಬ್ಯಾಂಕಾಕ್, ಗುರುವಾರ, 24 ಸೆಪ್ಟೆಂಬರ್ 2009( 19:40 IST )
ಏಡ್ಸ್ ವೈರಸ್‌ಗೆ ರಾಮಬಾಣವಾದ ಪ್ರಾಯೋಗಿಕ ಲಸಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆಂದು ವರದಿಯಾಗಿದೆ. ಈ ಲಸಿಕೆಯು ಎಚ್‌ವಿಐ ಸೋಂಕಿಗೀಡಾಗುವ ಅಪಾಯವನ್ನು ಶೇ.31ರಷ್ಟು ತಡೆಯುತ್ತದೆ. ವಿಶ್ವದ ಅತೀ ದೊಡ್ಡ ಏಡ್ಸ್ ಲಸಿಕೆ ಪ್ರಯೋಗವೆಂದು ಹೇಳಲಾಗಿದ್ದು ಥೈಲೆಂಡ್‌ನಲ್ಲಿ 16,000 ಕಾರ್ಯಕರ್ತರಿಗೆ ಲಸಿಕೆ ಪ್ರಯೋಗಿಸಲಾಯಿತೆಂದು ಬ್ಯಾಂಕಾಕ್‌ನಲ್ಲಿ ಸಂಶೋಧಕರು ಪ್ರಕಟಿಸಿದ್ದಾರೆ.
ಲಸಿಕೆಯ ಫಲ ಸಾಧಾರಣವಾಗಿದ್ದರೂ, ಏಡ್ಸ್ ಮಾರಣಾಂತಿಕ ಕಾಯಿಲೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ತಡೆಯ ಲಸಿಕೆಯಿದೆಯೆಂಬುದಕ್ಕೆ ಪ್ರಥಮ ಸಾಕ್ಷ್ಯಾಧಾರ ಸಿಕ್ಕಿದೆಯೆಂದು ಕರ್ನಲ್ ಜೆರೋಂ ಕಿಮ್ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಏಡ್ಸ್ ಲಸಿಕೆ ಪ್ರಾಯೋಜಿಸಿದ ಅಲರ್ಜಿ ಮತ್ತು ಸೋಂಕು ಕಾಯಿಲೆ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಡಾ.ಆಂಥೋನಿ ಫಾಸಿ, ಇದು ರಸ್ತೆಯ ಕೊನೆಯಲ್ಲವೆಂದು ಎಚ್ಚರಿಸಿದರು. ಲಸಿಕೆಯ ಫಲಶ್ರುತಿಯಿಂದ ತಮಗೆ ಆಶ್ಚರ್ಯ ಮತ್ತು ಸಂತೋಷ ಎರಡೂ ಆಗಿದೆಯೆಂದು ಹೇಳಿದ್ದಾರೆ.