ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎನ್‌ಪಿಟಿಗೆ ಸಹಿ ಹಾಕಿ: ಭದ್ರತಾ ಮಂಡಳಿ; ಇಲ್ಲ: ಭಾರತ (NPT | CTBT | Nuclear Weapon | Obama | UNSC | United Nation | India)
 
ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ (ಎನ್‌ಪಿಟಿ) ಮತ್ತು ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ (ಸಿಟಿಬಿಟಿ) ಒಪ್ಪಂದಗಳಿಗೆ ಇದುವರೆಗೆ ಸಹಿ ಹಾಕದಿರುವ ಎಲ್ಲ ರಾಷ್ಟ್ರಗಳು ತಕ್ಷಣವೇ ಸಹಿ ಹಾಕಬೇಕು ಎಂಬ ಉಲ್ಲೇಖವಿರುವ ಕರಡು ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುವಾರ ಸರ್ವಾನುಮತದ ಅಂಗೀಕಾರ ನೀಡಿದ್ದರೆ, ಇತ್ತ ಭಾರತವು, ಎನ್‌ಪಿಟಿಗೆ ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಶ್ವವನ್ನು ಅಣ್ವಸ್ತ್ರ-ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈ ನಿರ್ಣಯವನ್ನು ಮಂಡಿಸಿ, ತಕ್ಷಣವೇ ಇದರ ಮೇಲೆ ಮತದಾನಕ್ಕೆ ಒತ್ತಾಯಿಸಿದ್ದರು. ರಷ್ಯಾ ಮತ್ತು ಚೀನಾ ಮತ್ತು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ಗೊತ್ತುವಳಿಯನ್ನು ಬೆಂಬಲಿಸಿದ್ದವು.

ಮೊತ್ತ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ 15 ರಾಷ್ಟ್ರಗಳ ಭದ್ರತಾ ಮಂಡಳಿಯು, ಒಬಾಮ ಮಂಡಿಸಿದ ಗೊತ್ತುವಳಿಗೆ ಅಂಗೀಕಾರ ನೀಡುವ ಮೂಲಕ ಅಧಿವೇಶನವನ್ನು ಆರಂಭಿಸಿತು. "ಕರಡು ನಿರ್ಣಯವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ" ಎಂದು ಒಬಾಮ ಘೋಷಿಸಿದರು.

ಅಣ್ವಸ್ತ್ರಗಳ ಪ್ರಸರಣವನ್ನು ತಡೆಯುವುದು, ನಿಶ್ಶಸ್ತ್ರೀಕರಣವನ್ನು ಉತ್ತೇಜಿಸುವುದು ಮತ್ತು "ಅಣ್ವಸ್ತ್ರ ಭಯೋತ್ಪಾದನೆ"ಯ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಒಬಾಮ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ