ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಟರ್‌ನೆಟ್‌ ನೆರವಿನಿಂದ ಬಾಂಬ್ ನಿರ್ಮಿಸಿದ ಬಾಲಕ (Hong Kong | Bomb | Teenager | Internet)
 
ಇಂಟರ್‌ನೆಟ್ ಸಲಹೆಗಳನ್ನು ಬಳಸಿಕೊಂಡು ಅಪ್ರಾಪ್ತ ವಯಸ್ಕನೊಬ್ಬ ತಯಾರಿಸಿದ ಬಾಂಬ್‌ನಲ್ಲಿ ಸ್ನೇಹಿತನೊಬ್ಬ ಗಾಯಗೊಂಡ ಘಟನೆ ನಡೆದಿದೆ. ಇಂಟರ್‌ನೆಟ್ ಮಾನವನಿಗೆ ಉಪಯುಕ್ತ ಆಗುವುದರ ಜತೆ ಹಾನಿಯ‌ೂ ಇದೆಯೆಂಬುದಕ್ಕೆ ಇದು ಅಪ್ಪಟ ಉದಾಹರಣೆಯಾಗಿದೆ.

ಇಸ್ಲಾಮಿಕ್ ಭಯೋತ್ಪಾದಕರು ಬಯಸುವ ಸ್ಫೋಟಕವನ್ನು ತಾನು ಆನ್‌ಲೈನ್‌ ಸಲಹೆಗಳ ಮ‌ೂಲಕ ಕಲಿತು ಖುಷಿಗಾಗಿ ತಯಾರಿಸಿದ್ದಾಗಿ 14 ವರ್ಷ ವಯಸ್ಸಿನ ಬಾಲಕ ತಿಳಿಸಿದ್ದಾನೆ. ಆದರೆ ಬಾಂಬನ್ನು ತನ್ನ ಸ್ನೇಹಿತನೊಬ್ಬನಿಗೆ ಕೊಟ್ಟಾಗ ಸ್ನೇಹಿತ ಫ್ಯೂಸ್‌ಗೆ ಬೆಂಕಿಹಚ್ಚಿದ್ದರಿಂದ ಅದು ಸ್ಫೋಟಿಸಿತೆಂದೂ, ಸ್ನೇಹಿತನಿಗೆ ಮುಖದಲ್ಲಿ ಮತ್ತು ಕಣ್ಣು ಮತ್ತು ಎರಡು ಬೆರಳುಗಳಿಗೆ ಗಾಯವಾಗಿದೆಯೆಂದು ತಿಳಿದುಬಂದಿದೆ. ಅಪ್ರಾಪ್ತ ಬಾಲಕ ಗುರುವಾರ ಕೋರ್ಟ್‌ಗೆ ಹಾಜರಾಗಿ, ಸ್ಫೋಟಕ ವಸ್ತು ತಯಾರಿಸಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಎರಡು ಪ್ರಾಸ್ಟಿಕ್ ಸೀಸೆಗಳಲ್ಲಿ ಟ್ರಯಾಸಿಟೋನ್ ಟ್ರಿಪರಾಕ್ಸೈಡ್ ಪುಡಿಯನ್ನು ತುಂಬಿ ಬಾಂಬ್ ತಯಾರಿಸಲಾಗಿತ್ತೆಂದು ಕೋರ್ಟ್‌ಗೆ ತಿಳಿಸಲಾಗಿದೆ. ಜುಲೈ 2005ರ ಲಂಡನ್ ಬಾಂಬ್ ದಾಳಿ ಮತ್ತು ಅಮೆರಿಕ ಏರ್‌ಲೈನ್ಸ್ ಫ್ಲೈಟ್ 63ರನ್ನು ಬಲವಂತವಾಗಿ ಇಳಿಸಲು ಶೂ ಬಾಂಬರ್ ರಿಚರ್ಡ್ ರೈಡ್ ಬಳಸಿದ ರಾಸಾಯನಿಕದ ಮಾದರಿಯಲ್ಲಿ ಸ್ಫೋಟಕವನ್ನು ತಯಾರಿಸಲಾಗಿದೆ.

ಸ್ಥಳೀಯ ಹಾರ್ಡ್‌ವೇರ್ ಅಂಗಡಿಗಳಿಂದ ಮತ್ತು ಔಷಧಿಅಂಗಡಿಗಳಿಂದ ರಾಸಾಯನಿಕಗಳನ್ನು ಬಾಲಕ ಖರೀದಿಸಿದ್ದಾಗಿ ಅಪ್ರಾಪ್ತ ವಯಸ್ಕ ತಿಳಿಸಿದ್ದು, ತಾನು ಕೌತುಕದಿಂದ ಬಾಂಬ್ ತಯಾರಿಸಿದ್ದಾಗಿ ಬಾಲಕ ಹೇಳಿದ್ದಾನೆ.ಮಾನಸಿಕ ಮತ್ತು ಮನೋರೋಗ ವರದಿಗಳ ಸಿದ್ಧತೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಮ್ಯಾಜಿಸ್ಟ್ರೇಟ್ ಡೆನಿಸ್ ಲಾ ವಿಚಾರಣೆಯನ್ನು ಮುಂದೂಡಿದ್ದು, ಬಾಲಕನಿಗೆ ಅ.15ರವರೆಗೆ ಜಾಮೀನು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ