ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅರುಣಾಚಲ ಭಾರತದ್ದೇ, ಚೀನಾ ವಾದ ಸುಳ್ಳು: ಆಸ್ಟ್ರೇಲಿಯ (Australia | China | ADB loan | India)
 
ಅರುಣಾಚಲ ಪ್ರದೇಶದಲ್ಲಿ ಯೋಜನೆಯೊಂದಕ್ಕೆ ಎಡಿಬಿ ಸಾಲ ಒದಗಿಸುವುದಕ್ಕೆ ತಡೆ ಹಾಕಿದ ಚೀನಾ ಜತೆ ಇತ್ತೀಚೆಗೆ ದನಿಗೂಡಿಸಿದ್ದ ಆಸ್ಟ್ರೇಲಿಯ, ಅರುಣಾಚಲ ಭಾರತದ ಭಾಗವೆಂದು ಈಗ ಹೇಳುತ್ತಿದೆ. ಅರುಣಾಚಲ ಭಾರತದ ಭಾಗವಲ್ಲವೆಂಬ ಚೀನಾದ ವಾದವನ್ನು ತಾವು ನಂಬಿಲ್ಲವೆಂದು ಆಸ್ಟ್ರೇಲಿಯ ತಿಳಿಸಿದೆ.

ಅರುಣಾಚಲ ಭಾರತದ ಅವಿಭಾಜ್ಯ ಅಂಗವೆಂದು ಆಸ್ಟ್ರೇಲಿಯ ಸದಾ ನಂಬಿದ್ದು, ಏಷ್ಯಾ ಅಭಿವೃದ್ಧಿ ಬ್ಯಾಂಕಿನಲ್ಲಿ ಅರುಣಾಚದಲ್ಲಿನ ಯೋಜನೆಗೆ ಕೋರಿದ್ದ ಸಾಲದ ವಿರುದ್ಧ ತಾವು ಹಾಕಿದ ಮತವು ಐಡಿಬಿಐನ ಆಡಳಿತಮಂಡಳಿ ರೂಪಿಸಿದ ವಿಶಾಲ ನಿಲುವಿನ ಆಧಾರದ ಮೇಲೆ ಕೂಡಿತ್ತೆಂದು ನೂತನವಾಗಿ ನೇಮಕವಾದ ಆಸ್ಟ್ರೇಲಿಯ ಹೈಕಮೀಷನರ್ ಪೀಟರ್ ವರ್ಗೀಸ್ ತಿಳಿಸಿದ್ದಾರೆ.

ಇದು ಚೀನಾ ಪರ ಅಥವಾ ಭಾರತ ವಿರೋಧಿ ಮತವಲ್ಲ. ಎಡಿಬಿ ಆಡಳಿತಮಂಡಳಿಯ ನಿರ್ಧಾರದ ಆಧಾರದ ಮೇಲೆ ನಾವು ನಿಲುವು ಕೈಗೊಳ್ಳಬೇಕೆಂದು ಭಾವಿಸಿದ್ದಾಗಿ ವರ್ಗೀಸ್ ನವದೆಹಲಿಯಲ್ಲಿ ತಿಳಿಸಿದ್ದಾರೆ. ಅರುಣಾಚಲದ ಬಗ್ಗೆ ಭಾರತದ ನಿಲುವಿಗೆ ನಾವು ಬೆಂಬಲಿಸಿದ್ದು, ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರಿಗೆ ಪರಿಚಯ ಪತ್ರ ನೀಡುತ್ತಾ ವರ್ಗೀಸ್ ತಿಳಿಸಿದ್ದಾರೆ.

ಅರುಣಾಚಲದ ನೀರಾವರಿ ಯೋಜನೆಗೆ ಎಡಿಬಿ ಸಾಲ ನೀಡುವುದನ್ನು ತಪ್ಪಿಸುವುದರಲ್ಲಿ ಚೀನಾ ಜತೆ ಆಸ್ಟ್ರೇಲಿಯ ಕೂಡ ಕಳೆದತಿಂಗಳು ಸೇರಿಕೊಂಡಿತ್ತು. ಅರುಣಾಚಲ ವಿವಾದಿತ ಪ್ರದೇಶವಾದ್ದರಿಂದ ಬ್ಯಾಂಕ್ ಯೋಜನೆಗಳಿಗೆ ಸಾಲ ನೀಡುವಂತಿಲ್ಲವೆಂದು ವಾದಿಸಿದ ಚೀನಾ ಆಸ್ಟ್ರೇಲಿಯ ಬೆಂಬಲಕ್ಕಾಗಿ ಲಾಬಿ ನಡೆಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ