ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಯೀದ್ ಗೃಹಬಂಧನದ ಸುತ್ತ ಅನುಮಾನದ ಹುತ್ತ (Hafiz | Saeed | Mumbai | Dogar)
 
ಜಮಾತ್ ಉದ್ ದವಾ ಮುಖಂಡ ಮತ್ತು ಮುಂಬೈ ದಾಳಿಯ ಸೂತ್ರಧಾರಿಯೆಂದು ಭಾರತ ಆರೋಪಿಸಿದ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿ ಇರಿಸಿರುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿ ದೊಡ್ಡ ಸುದ್ದಿಯನ್ನು ಮಾಡಿರುವ ನಡುವೆ ಸಯೀದ್ ಗೃಹಬಂಧನದಲ್ಲಿ ಅಥವಾ ರಕ್ಷಣಾತ್ಮಕ ಕಸ್ಡಡಿಯಲ್ಲಿ ಇಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಯೀದ್ ಸುರಕ್ಷತೆ ಮತ್ತು ಭದ್ರತೆಗಾಗಿ ಮಾತ್ರ ಅವನ ಚಲನವಲನ ನಿರ್ಬಂಧದಲ್ಲಿಡುವಂತೆ ಅವನಿಗೆ ಸಲಹೆ ಅಥವಾ ಮನವಿ ಮಾಡಲಾಗಿದೆಯೆಂದು ಪಂಜಾಬ್ ಪೊಲೀಸ್ ಮುಖಂಡ ತಾರಿಖ್ ಸಲೀಂ ದೋಗಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಸಯೀದ್ ಗೃಹಬಂಧನದ ಸುತ್ತ ಅನುಮಾನದ ಹುತ್ತ ಕವಿದಿದೆ.

ಮುಂಬೈ ಭಯೋತ್ಪಾದನೆ ದಾಳಿಗಳ ಬಗ್ಗೆ ಕ್ಷಿಪ್ರ ತನಿಖೆಗೆ ಭಾರತ ಒತ್ತಾಯಿಸುತ್ತಿದ್ದು, ವಿದೇಶಾಂಗ ಸಚಿವ ಕೃಷ್ಣ ಮತ್ತು ಪಾಕಿಸ್ತಾನದ ಸಹವರ್ತಿ ಖುರೇಷಿ ನಡುವೆ ಭೇಟಿಯಲ್ಲಿ ಮುಂಬೈ ಭಯೋತ್ಪಾದನೆ ವಿಷಯ ಚರ್ಚೆಯ ಪ್ರಮುಖ ವಸ್ತುವಾಗಲಿದೆ. ಸಯೀದ್ ಗೃಹಬಂಧನದಲ್ಲಿ ಇಲ್ಲವೆಂದು ದೋಗಾರ್ ಹೇಳಿದರೆ, ಸಯೀದ್‌ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೆಂದು ಲಾಹೋರ್ ಪೊಲೀಸ್ ಮುಖಂಡ ಪರ್ವೇಜ್ ರಾಥೋರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಜೆಹಾದ್ ಯುದ್ಧ ಸಾರುವಂತೆ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಎರಡು ಪ್ರಕರಣ ದಾಖಲಿಸಿ ಸಯೀದ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆಯೆಂದು ಅವರು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ, ಹಫೀಜ್, ಗೃಹಬಂಧನ, ಪೊಲೀಸ್