ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾಮಾನ್ಯ ಶಿಶುಗಿಂತ 3 ಪಟ್ಟು ತೂಕದ ಮಗುವಿನ ಜನನ (Kisaran | Indonesia | Newborn | Infant)
 
ಸಾಮಾನ್ಯ ನವಜಾತ ಶಿಶುವಿಗಿಂತ ಮ‌ೂರುಪಟ್ಟು ತೂಕಹೊಂದಿರುವ ಮಗುವೊಂದು ಇಂಡೊನೇಶಿಯ ಆಸ್ಪತ್ರೆಯಲ್ಲಿ ಜನಿಸಿದೆ. 19.2 ಪೌಂಡ್(8.7 ಕಿಲೋಗ್ರಾಂ) ತೂಕವುಳ್ಳ ಗಂಡುಮಗುವಿನ ಪ್ರತ್ಯಕ್ಷದರ್ಶನ ಪಡೆಯಲು ಇಂಡೊನೇಶಿಯ ಆಸ್ಪತ್ರೆಗೆ ಜನರು ಮುಗಿಬಿದ್ದರು. ಗಂಡುಮಗುವನ್ನು ಡಯಾಬಿಟಿಕ್ ತಾಯಿಯಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮ‌ೂಲಕ ಹೊರತೆಗೆಯಲಾಯಿತು.

ಅಕ್ಬರ್ ರಿಸುಡ್ಡಿನ್ ಎಂಬ ಹೆಸರಿನ ಮಗು ತಾಯಿಯ ಗರ್ಭದಿಂದ ಜನನಕ್ಕೆ 40 ನಿಮಿಷ ತೆಗೆದುಕೊಂಡ. ಮಗುವಿನ ಅಸಹಜ ತೂಕ ಮತ್ತು ಗಾತ್ರದಿಂದ ಶಸ್ತ್ರಚಿಕಿತ್ಸೆ ಜಟಿಲವಾಯಿತು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಡಾ.ಬಿನ್ಸಾರ್ ಸಿತಾಂಗಂಗ್ ತಿಳಿಸಿದ್ದಾರೆ. ಸುಮಾರು 24 ಇಂಚುಗಳು ಉದ್ದವಿದ್ದ ಮಗುವಿನ ದರ್ಶನ ಪಡೆಯಲು ಗುಂಪು ಉತ್ತರ ಸುಮಾತ್ರ ಪ್ರಾಂತ್ಯದ ಕಿಸಾರನ್ ಪಟ್ಟಣದ ಅಬ್ದುಲ್ ಮನಾನ್ ಆಸ್ಪತ್ರೆಯಲ್ಲಿ ನೆರೆದಿತ್ತು.

ಮಗುವಿಗೆ ಮೇರೆಮೀರಿದ ಹಸಿವಾದ್ದರಿಂದ ನಿರಂತರ ಶುಶ್ರೂಷೆಗೆ ಒಳಪಡಿಸಲಾಯಿತು. ಗರ್ಭಿಣಿಯಾಗಿದ್ದಾಗ ತಾಯಿ ದೇಹದಲ್ಲಿ ಮಿತಿಮೀರಿದ ಗ್ಲುಕೋಸ್‌ ಫಲವಾಗಿ ರಿಸುದ್ದಿನ್ ತೂಕ ಹೆಚ್ಚಿತೆಂದು ವೈದ್ಯರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ