ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಿ-20 ನಾಯಕರ ಪತ್ನಿಯರಿಗೆ ಮಿಶೆಲೆ ಉಡುಗೊರೆ (porcelain | Manmohan | Kaur | White House)
 
ಜಿ-20 ನಾಯಕರ ಪತ್ನಿಯರಿಗೆ ವಿಶೇಷ ಕೊಡುಗೆ ನೀಡಲು ಅಮೆರಿಕದ ಪ್ರಥಮ ಮಹಿಳೆ ಮಿಶೆಲೆ ಒಬಾಮಾ ಪೋರ್ಸಲೈನ್ ಟೀ ಸೆಟ್ ಮತ್ತು ಶ್ವೇತಭವನದ ಜೇನುತುಪ್ಪವನ್ನು ಪಿಟ್ಸ್‌ಬರ್ಗ್‌ಗೆ ತಂದಿದ್ದರು. ತಮ್ಮ ಅತಿಥಿಗಳಿಗೆ ಕೊಡುವ ಉಡುಗೊರೆ ಐತಿಹಾಸಿಕ ಮತ್ತು ವೈಯಕ್ತಿಕ ಎರಡೂ ಆಗಿರಬೇಕೆಂಬ ಉದ್ದೇಶದಿಂದ ಇವೆರಡು ಉಡುಗೊರೆಗಳ ಜತೆಗೆ ಪಿಟ್ಸ್‌ಬರ್ಗ್ ಶೃಂಗಸಭೆಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಜೇನುತುಪ್ಪದ ಕಲಶವನ್ನು ಸಹ ಅವರು ತಂದಿದ್ದರು.

ಪ್ಲಾಟಿನಂ ನೇರಳೆ ಬಣ್ಣದ ಪೋರ್ಸಲೈನ್ ವಿನ್ಯಾಸದ ಚಹಾಕಪ್‌ಗಳು ಉತ್ಕೃಷ್ಟ ಮತ್ತು ಸಮಕಾಲಿಕವಾಗಿದ್ದು, 1861ರಲ್ಲಿ ಚಿನ್ನದ ಮತ್ತು ನೇರಳೆ ಬಣ್ಣದ ಶ್ವೇತಭವನದ ಪಿಂಗಾಣಿಗಳಿಂದ ಸ್ಫೂರ್ತಿ ಪಡೆಯಲಾಗಿದೆ. ಸಾಸರ್‌ನಲ್ಲಿ ಪ್ಲಾಟಿನಂ ಬಳಕೆಯು ಪಿಟ್ಸ್‌ಬರ್ಗ್ ಉಕ್ಕು ಕೈಗಾರಿಕೆ ಬೇರನ್ನು ಸಂಕೇತಿಸುತ್ತದೆ. ನೇರಳೆಬಣ್ಣದ ಬಳಕೆಯು ಇಲ್ಲಿನಾಯ್ಸ್ ರಾಜ್ಯದ ಬಣ್ಣವಾಗಿದೆ.

ಪರ್ಪಲ್ ವೈಲಟ್ ಬಣ್ಣವು ಅಧ್ಯಕ್ಷ ಲಿಂಕನ್ ಮತ್ತು ಒಬಾಮಾ ತವರು ರಾಜ್ಯವನ್ನು ಸಂಕೇತಿಸುತ್ತದೆ. ಟೀಕಪ್ ಕೆಳಗಿನ ಗುಲಾಬಿ ಬಣ್ಣವು ಅಮೆರಿಕದ ಅಧಿಕೃತ ಪುಷ್ಪ ಮತ್ತು ವಾಷಿಂಗ್ಟನ್ ಅಧಿಕೃತ ಹೂವಾದ ಅಮೆರಿಕನ್ ಬ್ಯೂಟಿ ರೋಸ್ ಪ್ರತಿನಿಧಿಸುತ್ತದೆ. ಈ ಸಂದರ್ಭಕ್ಕೆ ತಯಾರಿಸಲಾದ ಶ್ವೇತಭವನದ ಜೇನುತುಪ್ಪವು ಶ್ವೇತಭವನದ ಅಡುಗೆಮನೆ ತೋಟದ ಬಳಿಯಿರುವ ಶ್ವೇತಭವನದ ಆಸ್ತಿಯಲ್ಲಿರುವ ಜೇನುಗೂಡಿನಿಂದ ತೆಗೆಯಲಾಗಿದೆ.

ಜೇನುತುಪ್ಪದ ಕಲಶವು ನಿಸರ್ಗದಿಂದ ಸ್ಫೂರ್ತಿ ಪಡೆದ ಮ‌ೂಲ ವಿನ್ಯಾಸವಾಗಿದ್ದು, ಖನಿಜಗಳಿಂದ ತೆಗೆದ ಸೀಸರಹಿತ ಹರಳಾಗಿದ್ದು, ಅಮೆರಿಕದಲ್ಲಿ ಮಾತ್ರ ಸಿಗುತ್ತದೆಂದು ಹೇಳಲಾಗಿದೆ. ಕ್ಯಾಲಿಫೋರ್ನಿಯ ಕಲಾವಿದ ಇದನ್ನು ರೂಪಿಸಿದ್ದು, ಪ್ರಥಮ ಮಹಿಳೆಯ ಸಹಿಯನ್ನು ಹಾಕಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ