ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉತ್ತೇಜನ ಪ್ಯಾಕೇಜ್ ಮುಂದುವರಿಗೆ ಜಿ-20 ಅಸ್ತು (India | Stimulus | Roadmap | Agreement)
 
ಭಾರತ ಮತ್ತಿತರ ರಾಷ್ಟ್ರಗಳ ಕಳಕಳಿಗೆ ಸ್ಪಂದಿಸಿರುವ ಜಿ-20 ರಾಷ್ಟ್ರಗಳ ನಾಯಕರು ಜಾಗತಿಕ ಆರ್ಥಿಕ ಚೇತರಿಕೆ ತ್ವರಿತಗೊಳಿಸಲು ಉತ್ತೇಜನ ಪ್ಯಾಕೇಜ್ ಮುಂದುವರಿಕೆಗೆ ನಿರ್ಧರಿಸಿವೆ. ಬಿಕ್ಕಟ್ಟಿಗೆ ಕಾರಣವಾದ ಆರ್ಥಿಕ ದುರ್ಬಲತೆ ನಿವಾರಿಸಿ ಸುದೀರ್ಘ ಕಾಲದ ಉತ್ತೇಜನಕ್ಕೆ ನೀಲನಕ್ಷೆ ರೂಪಿಸುವಲ್ಲಿ ಜಿ-20ಯನ್ನು ಕೇಂದ್ರವಾಗಿಸುವ ಐತಿಹಾಸಿಕ ಒಪ್ಪಂದವನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ನಾಯಕರು ಅಂಗೀಕಾರದ ಮುದ್ರೆ ಒತ್ತಿದ್ದಾರೆ.

ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಜಿ-20ಯನ್ನು ಪ್ರಧಾನವೇದಿಕೆಯಾಗಿ ನಾಯಕರು ಅನುಮೋದಿಸಿದರು. ಸಮತೋಲಿತ ಜಾಗತಿಕ ಆರ್ಥಿಕತೆ, ಹಣಕಾಸು ವ್ಯವಸ್ಥೆ ಸುಧಾರಣೆ, ಬಡವರ ಜೀವನಮಟ್ಟ ಸುಧಾರಣೆಗೆ ರಾಷ್ಟ್ರಗಳು ಗಮನಹರಿಸಬೇಕೆಂದು ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಅಮೆರಿಕ ಅಧ್ಯಕ್ಷ ಒಬಾಮಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಸರ್ಕಾರದ ಮುಖ್ಯಸ್ಥರಿಗೆ ಭೋಜನಕೂಟದ ಆತಿಥ್ಯ ವಹಿಸಿದ ಬಳಿಕ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ಕೆಲವು ಐರೋಪ್ಯ ಸರ್ಕಾರದ ಮುಖ್ಯಸ್ಥರು ಲಂಡನ್‌ನಲ್ಲಿ ಸಮ್ಮತಿಸಿರುವಂತೆ ಉತ್ತೇಜಕ ಪ್ಯಾಕೇಜ್ ಅಂತ್ಯಗೊಳಿಸಲು ನಿರ್ಗಮನ ನೀತಿಯನ್ನು ತರಬೇಕೆಂದು ಒತ್ತಾಯಿಸಿರುವ ನಡುವೆ, ಉತ್ತೇಜಕ ಪ್ಯಾಕೇಜ್ ಮುಂದುವರಿಕೆ ಅಗತ್ಯವನ್ನು ಘೋಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ