ನ್ಯೂಯಾರ್ಕ್, ಶನಿವಾರ, 26 ಸೆಪ್ಟೆಂಬರ್ 2009( 16:40 IST )
ಬ್ಯಾಂಕ್ ಆಫ್ ಅಮೆರಿಕ(ಬೋಫಾ) ಗ್ರಾಹಕ ಸೇವೆ ಬಗ್ಗೆ ನಿಜವಾಗಲೂ ತೀವ್ರ ಅಸಂತುಷ್ಟನಾಗಿದ್ದ ಡಾಲ್ಟನ್ ಚಿಸ್‌ಕಾಂ ಎಂಬ ವ್ಯಕ್ತಿಯೊಬ್ಬ ಅನಾಮತ್ 1784 ಬಿಲಿಯನ್, ಟ್ರಿಲಿಯನ್ ಡಾಲರ್ ತನ್ನ ಖಾತೆಗೆ ಮರುದಿನವೇ ಜಮಾ ಮಾಡಬೇಕೆಂದು ದಾವೆ ಹೂಡಿದ. ಹೆಚ್ಚುವರಿಯಾಗಿ 200,164.000 ಡಾಲರ್ ಪಾವತಿ ಮಾಡುವಂತೆ ಅವನು ಒತ್ತಾಯಿಸಿದ.
ಚಿಸ್ಕಾಮ್‌ನನ್ನು ಸಂಧಿಸುವ ಬ್ಯಾಂಕಿನ ಯತ್ನ ವಿಫಲವಾಯಿತು. ಬ್ಯಾಂಕ್ ಆಫ್ ಅಮೆರಿಕ ವಕ್ತಾರ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದೊಂದು ಊಹಿಸಲಾಗದ ಮೊತ್ತವೆಂದು ಅಮೆರಿಕ ಜಿಲ್ಲಾ ನ್ಯಾಯಾಧೀಶ ಡೆನ್ನಿ ಚಿನ್ ಮ್ಯಾನ್‌ಹ್ಯಾಟನ್ ಫೆಡರಲ್ ಕೋರ್ಟ್‌ನಲ್ಲಿ ಸಂಕ್ಷಿಪ್ತ ಆದೇಶದಲ್ಲಿ ಪ್ರತಿಕ್ರಿಯಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಬ್ಯಾಂಕಿಗೆ ಸರಣಿ ಕರೆಗಳನ್ನು ಮಾಡಿದ ಚಿಸ್ಕಾಂಗೆ ಸ್ಪಾನಿಷ್ ಮಹಿಳೆಯಿಂದ ಅಸಂಗತ ಮಾಹಿತಿ ಸಿಕ್ಕಿತೆಂದು ದೂರಿದ್ದಾಗಿ ನ್ಯಾಯಾಧೀಶರು ಬರೆದಿದ್ದಾರೆ.
ಅಪೂರ್ಣ ರೂಟಿಂಗ್ ಸಂಖ್ಯೆಗಳಿದ್ದರಿಂದ ಚೆಕ್‌ಗಳು ತಿರಸ್ಕೃತವಾಗಿವೆಯೆಂದು ಚೆಸ್ಕಾಮ್ ಆರೋಪಿಸಿದ್ದಾರೆಂದು ನ್ಯಾಯಾಧೀಶರು ತಿಳಿಸಿದರು. ಚಿನ್ ಅವರು ನಾಸ್ಡಾಕ್ ಷೇರುಪೇಟೆಯ ಅವ್ಯವಹಾರದ ಆರೋಪದ ಮೇಲೆ ಬರ್ನಾರ್ಡ್ ಮಡಾಫ್‌ಗೆ 150 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿದ ನ್ಯಾಯಾಧೀಶರು. ಚಿಸ್‌ಕಾಂ ಬಯಸಿರುವ ಹಣದ ಮೊತ್ತವು ಸೆಕ್ಸ್‌ಟಿಲಿಯನ್ ಡಾಲರ್ ಅಥವಾ ಒಂದರ ಪಕ್ಕದಲ್ಲಿ 21 ಸೊನ್ನೆಗಳನ್ನು ಸೇರಿಸುವುದಕ್ಕಿಂತ ದೊಡ್ಡದಾಗಿದೆ. ಚಿಸ್ಕಾಂ ಕೇಳಿದ ಪರಿಹಾರದ ಮೊತ್ತವು ಒಂದರ ಮುಂದೆ 22 ಸೊನ್ನೆಗಳನ್ನು ಸೇರಿಸಿದಷ್ಟಾಗುತ್ತದೆ.
ವಿಶ್ವಬ್ಯಾಂಕ್ ಅಂದಾಜು ಮಾಡಿದ ವಿಶ್ವದ 2008 ಒಟ್ಟು ದೇಶೀಯ ಉತ್ಪನ್ನವಾದ 60 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚು. ಕಾಸ್ಮಿಕ್ ಸ್ಕೇಲ್‌ನಲ್ಲಿ ಮಾತ್ರ ಇಂತಹ ಸಂಖ್ಯೆಗಳನ್ನು ನಿಭಾಯಿಸಲು ಸಾಧ್ಯವೆಂದು ನ್ಯೂಯಾರ್ಕ್ ವಿವಿಯ ಗಣಿತವಿಜ್ಞಾನ ಪ್ರಾಧ್ಯಾಪಕ ಸಿಲ್ವಿಯನ್ ಕ್ಯಾಪಲ್ ಹೇಳಿದ್ದಾರೆ.
ಬ್ರಹ್ಮಾಂಡದ ಎಲ್ಲ ಗ್ರಹಗಳಲ್ಲಿ ಬ್ಯಾಂಕ್ ಆಫ್ ಅಮೆರಿಕ ಶಾಖೆಗಳನ್ನು ಹೊಂದಿದ್ದರೆ ಚಿಸ್ಕಾಮ್ ಬೇಡಿಕೆಗೆ ಅರ್ಥಬರುತ್ತದೆಂದು ಅವರು ಹೇಳಿದ್ದಾರೆ. ಚಿಸ್ಕಾಂ ಕೇಳಿದ ಪರಿಹಾರಕ್ಕೆ ಆಧಾರವೇನೆಂಬುದನ್ನು ವಿವರಣೆ ನೀಡುವಂತೆ ಇಲ್ಲದಿದ್ದರೆ ದೂರು ವಜಾಗೊಳ್ಳುತ್ತದೆಂದು ನ್ಯಾಯಾಧೀಶ ಚಿನ್ ಚಿಸ್ಕಾಂಗೆ ಅ.23ರವರೆಗೆ ಕಾಲಾವಕಾಶ ನೀಡಿದ್ದಾರೆ.