ಪಿಟ್ಸ್ಬರ್ಗ್, ಶನಿವಾರ, 26 ಸೆಪ್ಟೆಂಬರ್ 2009( 18:03 IST )
ದೇಶದ ಅನೇಕ ಭಾಗಗಳಲ್ಲಿ ಬಾಧಿತವಾಗಿರುವ ನಕ್ಸಲೀಯ ಪಿಡುಗಿನ ವಿರುದ್ಧ ಹೋರಾಟಕ್ಕೆ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದು ಸರ್ಕಾರದ ಅವಳಿ ಧೋರಣೆಗಳು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶನಿವಾರ ತಿಳಿಸಿದರು.
ಕನಿಷ್ಠ ಕಾನೂನು ಸುವ್ಯವಸ್ಥೆಯ ಜಾರಿ ಅಗತ್ಯದೊಂದಿಗೆ, ಬುಡಕಟ್ಟು ಮತ್ತು ಇತರೆ ಅಭಿವೃದ್ಧಿಯಾಗದ ಪ್ರದೇಶಗಳ ಅಭಿವೃದ್ಧಿಗೆ ಪ್ರಯತ್ನಗಳು ನಡೆಯಬೇಕು ಎಂದು ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವ ಅವರ ಎರಡು ದಿನಗಳ ಭೇಟಿಯನ್ನು ಮುಗಿಸುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಸಿಂಗ್ ಹೇಳಿದರು.
ನಕ್ಸಲರ ವಿರುದ್ಧ ಹೋರಾಟಕ್ಕೆ ಸೇನೆಯನ್ನು ಬಳಸುವುದಿಲ್ಲವೆಂದು ಪಿ.ಚಿದಂಬರಂ ಘೋಷಿಸಿದ ಬಳಿಕ ನಕ್ಸಲ್ ಸಮಸ್ಯೆ ನಿಗ್ರಹಕ್ಕೆ ಅವಳಿ ಕ್ರಮಗಳಿಗೆ ಪ್ರಧಾನಮಂತ್ರಿ ಮಹತ್ವ ನೀಡಿದ್ದಾರೆ.
ಮಾವೋವಾದಿಗಳ ಪೀಡಿತ ಚತ್ತೀಸ್‌ಗಢ ಮತ್ತು ಜಾರ್ಖಂಡ್‌ಗೆ ಭೇಟಿ ನೀಡಿದ್ದ ಚಿದಂಬರಂ, ಎಡಪಂಥೀಯ ಉಗ್ರವಾದವು ನಮ್ಮ ಜೀವನವಿಧಾನದ ಮೇಲೆ, ನಮ್ಮ ಗಣರಾಜ್ಯ ಮತ್ತು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲು ಎಂದು ಹೇಳಿದ್ದರು.