ಬಾರ್ಸಿಲೋನಾ, ಭಾನುವಾರ, 27 ಸೆಪ್ಟೆಂಬರ್ 2009( 11:05 IST )
ಸ್ಪೇನ್‌ನ ಬಾರ್ಸಿಲೋನಾ ನಗರದ ವಿಶಿಷ್ಟ ಕಾರಣಕ್ಕೆ ಸುದ್ದಿಯಲ್ಲಿದೆ. ಅದೇನು ಗೊತ್ತಾ...?ಈ ನಗರ ಜೇಬುಗಳ್ಳತನದಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಪಡೆದುಕೊಂಡಿದೆ.
ಬಾರ್ಸಿಲೋನಾಗೆ ಭೇಟಿ ನೀಡುವ ಪ್ರವಾಸಿಗರೇ ಹೆಚ್ಚಾಗಿ ಜೇಬುಗಳ್ಳತನಕ್ಕೆ ಬಲಿಯಾಗುತ್ತಿದ್ದಾರೆ. ಪ್ರವಾಸ ಸಂಬಂಧಿ ವಿಷಯಗಳಿಗೆ ಮೀಸಲಾಗಿರುವ ಟ್ರಿಪ್ ಅಡ್ವೈಸರ್ ವೆಬ್‌ಸೈಟ್ ಸಮೀಕ್ಷೆಯಿಂದ ಈ ವಿಷಯ ಬಹಿರಂಗವಾಗಿದೆ.
ಟಾಪ್ 10 ಪಟ್ಟಿಯಲ್ಲಿ ಭಾರತ ಸೇರಿದಂತೆ ಏಷ್ಯಾದ ಯಾವುದೇ ರಾಷ್ಟ್ರದ ನಗರಗಳಿಲ್ಲ. ಟಾಪ್ 10ಪಟ್ಟಿಯಲ್ಲಿ ಬಾರ್ಸಿಲೋನಾ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇರುವ ನಗರಗಳೆಂದರೆ ಇಟಲಿಯ ರೋಮ್, ಜೆಕ್ ಗಣರಾಜ್ಯದ ಪೆರುಗ್ವೆ, ಸ್ಪೇನ್‌ನ ಮ್ಯಾಡ್ರಿಕ್, ಫ್ರಾನ್ಸ್‌ನ ಪ್ಯಾರಿಸ್, ಇಟಲಿಯ ಫ್ಲಾರೆನ್ಸ್, ಅರ್ಜೈಂಟೀನಾದ ಬ್ಯೂನಸ್ ಐರಿಸ್, ನೆದರಲ್ಯಾಂಡ್‌ನ ಆಮ್‌ಸ್ಟರ್ ಡಾಂ, ಗ್ರೀಸ್‌ನ ಅಥೆನ್ಸ್, ವಿಯೆಟ್ನಾಂನ ಹನೋಯಿ.