ತನ್ನ ವಿರುದ್ಧ ಪಾಕಿಸ್ತಾನ ಸರ್ಕಾರ ಹೂಡಿರುವ ಮೊಕದ್ದಮೆಗಳನ್ನು ಪ್ರಶ್ನಿಸಿ ಮುಂಬೈ ದಾಳಿಯ ರೂವಾರಿ ಎನ್ನಲಾದ ಉಗ್ರ ಹಫೀಜ್ ಮೊಹಮದ್ ಸಯೀದ್ ಸಲ್ಲಿಸಿರುವ ಅರ್ಜಿ ವಿಚಾರಣೆಗಾಗಿ ಇಬ್ಬರು ಸದಸ್ಯರುಳ್ಳ ನ್ಯಾಯಪೀಠ ರಚಿಸಲಾಗಿದೆ.
ಸೋಮವಾರ ಈ ನ್ಯಾಯಪೀಠ ಸಯೀದ್‌ನ ಅರ್ಜಿ ವಿಚಾರಣೆ ನಡೆಸಲಿದೆ. ಜಿಹಾದ್‌ಗೆ ಜನರನ್ನು ಪ್ರೇರೇಪಿಸಿದ ಹಾಗೂ ಜಿಹಾದ್‌ಗಾಗಿ ಜನರಿಂದ ಹಣ ಸಂಗ್ರಹಿಸಿದ ಆರೋಪ ಹೊರಿಸಿ ಸಯೀದ್ ವಿರುದ್ಧ 2 ದೂರನ್ನು ದಾಖಲಿಸಲಾಗಿದೆ.
ಮತ್ತೊಂದೆಡೆ ಪಾಕಿಸ್ತಾನ ಉಗ್ರ ನಿಗ್ರಹ ಕೋರ್ಟ್ ಮುಂಬೈ ದಾಳಿ ಶಂಕಿತರ ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದೆ. ಏತನ್ಮಧ್ಯೆ ಮುಂಬೈ ದಾಳಿಕೋರರ ವಿರುದ್ಧ ಪಾಕ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಡ ಹೇರಿದೆ.