ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಮುಲ್ಲಾ ಓಮರ್‌ಗೆ ಐಎಸ್‌ಐ ಕೃಪಾಕಟಾಕ್ಷ (Pakistan | Taliban | ISI | Mullah Omar | London | US)
 
ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ತಾಲಿಬಾನ್ ಸೇರಿದಂತೆ ಅದರ ವರಿಷ್ಠ ಮುಲ್ಲಾ ಓಮರ್‌ ಹಾಗೂ ಇನ್ನಿತರ ಉಗ್ರಗಾಮಿ ಸಂಘಟನೆಗಳ ಮುಖಂಡರಿಗೆ ಐಎಸ್ಐ ರಕ್ಷಣೆ ಒದಗಿಸುತ್ತಿರುವುದಾಗಿ ಆರೋಪಿಸಿರುವ ಅಮೆರಿಕ, ಆ ಹಿನ್ನೆಲೆಯಲ್ಲಿ ಕ್ವೆಟ್ಟಾ ಪ್ರದೇಶಕ್ಕೆ ಕಮಾಂಡೋ ಪಡೆಗಳನ್ನು ಕಳುಹಿಸಿ ಉಗ್ರರನ್ನು ಸೆರೆಹಿಡಿಯುವುದು ಅಥವಾ ಕೊಲ್ಲಲು ಚರ್ಚೆ ನಡೆಸುತ್ತಿರುವುದಾಗಿ ಭಾನುವಾರ ಮಾಧ್ಯಮದ ವರದಿಯೊಂದು ತಿಳಿಸಿದೆ.

ಅಫ್ಘಾನಿಸ್ತಾನ ಗಡಿಭಾಗದಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚುತ್ತಿದ್ದು ಅಮೆರಿಕ ಹೆಚ್ಚಿನ ತಲೆನೋವು ಉಂಟು ಮಾಡಿರುವ ಹಿನ್ನೆಲೆಯಲ್ಲಿ ಮುಲ್ಲಾ ಓಮರ್ ಹಾಗೂ ತಾಲಿಬಾನ್ ವಿರುದ್ಧ ವೈಮಾನಿಕ ದಾಳಿ ನಡೆಸುವ ಕುರಿತು ಅಮೆರಿಕ ಬೆದರಿಕೆ ಹಾಕಿರುವುದಾಗಿ ದಿ ಸಂಡೆ ಟೈಮ್ಸ್ ವರದಿ ಮಾಡಿದೆ.

ಅಲ್ಲದೇ, ಅಫ್ಘಾನಿಸ್ತಾನದಲ್ಲಿ ಮಿಲಿಟರಿ ಪಡೆಯನ್ನು ಕಡಿತಗೊಳಿಸಲು ಅಮೆರಿಕ ಉಪಾಧ್ಯಕ್ಷ ಜೊಯ್ ಬಿಡೆನ್ ಸಲಹೆ ನೀಡಿದ್ದು, ಪಾಕಿಸ್ತಾನದಲ್ಲಿ ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರರ ವಿರುದ್ಧ ಹೆಚ್ಚಿನ ನಿಗಾ ವಹಿಸಬೇಕೆಂದು ಹೇಳಿರುವುದಾಗಿ ವರದಿ ವಿವರಿಸಿದೆ.

ಅಪಾಯವನ್ನು ಅರಿತಿರುವ ತಾಲಿಬಾನ್ ಉಗ್ರಗಾಮಿ ಮುಖಂಡರು ಕರಾಚಿ ನಗರದೊಳಕ್ಕೆ ಸೇರಿಕೊಳ್ಳಲು ಯೋಜನೆ ರೂಪಿರುವುದಾಗಿ ವೆಸ್ಟರ್ನ್ ಗುಪ್ತಚರ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿರುವ ವರದಿ, ಒಂದು ವೇಳೆ ಕರಾಚಿಯೊಳಗೆ ಸೇರಿಕೊಂಡರೆ ದಾಳಿ ನಡೆಸುವುದು ಕಷ್ಟಸಾಧ್ಯ ಎಂದಿರುವ ಅಮೆರಿಕ ಆ ನಿಟ್ಟಿನಲ್ಲಿ ಕ್ವೆಟ್ಟಾದೊಳಗೆ ಕಮಾಂಡೋವನ್ನು ಕಳುಹಿಸಿ ಉಗ್ರರನ್ನು ಸದೆಬಡಿಯಲು ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ