ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ: ಪರಾರಿಯಾಗಲು ಯತ್ನಿಸಿದ 19ತಮಿಳರ ಬಂಧನ (Tamils | Lanka | Army | Colombo | LTTE)
 
ಶ್ರೀಲಂಕಾದ ವಾಯುನಿಯಾ ಜಿಲ್ಲೆಯಲ್ಲಿನ ನಿರಾಶ್ರಿತರ ಶಿಬಿರದಿಂದ ಪರಾರಿಯಾಗಲು ಯತ್ನಿಸಿದ್ದ ತಮಿಳು ನಾಗರಿಕರ ಮೇಲೆ ಆರ್ಮಿ ಪಡೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, 19ಮಂದಿಯನ್ನು ಸೆರೆಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಮೂರು ದಶಕಗಳ ಕಾಲ ವೇಲುಪಿಳ್ಳೈ ಪ್ರಭಾಕರನ್ ನೇತೃತ್ವದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರದ ಹೋರಾಟ ನಡೆಸಿ, ಕೊನೆಗೂ ಶ್ರೀಲಂಕಾಸೇನಾ ಪಡೆಯ ದಾಳಿಗೆ ಪ್ರಭಾಕರನ್ ಬಲಿಯಾಗುವ ಮೂಲಕ ಎಲ್‌ಟಿಟಿಇ ಹೋರಾಟ ಅಂತ್ಯಗೊಂಡಿತ್ತು. ಬಳಿಕ ಅಲ್ಲಿನ ತಮಿಳು ನಾಗರಿಕರನ್ನು ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿತ್ತು.

ವೆಲ್‌ಪೆರ್ ಗ್ರಾಮದಲ್ಲಿನ ತಮಿಳರ ಒಂದು ಗುಂಪು ಪರಾರಿಯಾಗಲು ಯತ್ನಿಸಿರುವುದಾಗಿ ಮಿಲಿಟರಿ ವಕ್ತಾರ ಉದಯ ನಾನಾಯಾಕ್ಕಾರ್ ತಿಳಿಸಿದ್ದು, 19ಮಂದಿಯನ್ನು ಮರುವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು.

ಪರಾರಿಯಾಗುತ್ತಿರುವ ಸಂದರ್ಭದಲ್ಲಿ ಓರ್ವ ಹ್ಯಾಂಡ್ ಗ್ರೆನೇಡ್ ಅನ್ನು ಎಸೆಯಲು ಯತ್ನಿಸಿದ್ದು, ಆಗ ಮಿಲಿಟರಿ ಪಡೆ ಗುಂಡಿನ ದಾಳಿ ನಡೆಸಬೇಕಾಯಿತು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ