ಆಕಾಶದಲ್ಲಿ ಪ್ರಧಾನಿ ಜನ್ಮದಿನ ಆಚರಣೆ
ಪ್ರಧಾನಿ ಅವರ ವಿಶೇಷ ವಿಮಾನ, ಸೋಮವಾರ, 28 ಸೆಪ್ಟೆಂಬರ್ 2009( 10:50 IST )
ಪ್ರಧಾನಿ ಡಾ. ಮನಮೋಹನ ಸಿಂಗ್ ಶನಿವಾರ ಆಕಾಶದಲ್ಲಿ ತಮ್ಮ 77ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಜಿ-20 ಶೃಂಗಸಭೆ ಮುಗಿಸಿ ಜಿನೀವಾಗೆ ತೆರಳುವ ಮಾರ್ಗದಲ್ಲಿ ವಿಮಾನದಲ್ಲೇ ಅವರು ಬೃಹತ್ ಕೇಕ್ ಕತ್ತರಿಸಿದರು. ಪತ್ನಿ ಗುರುಶರಣ್ ಕೌರ್ ಹ್ಯಾಪಿ ಬರ್ತ್‌ಡೇ ಗೀತೆ ಹಾಡಿದರೆ, ಪ್ರಧಾನಿ ಜೊತೆ ಶೃಂಗಸಭೆಗೆ ತೆರಳಿದ್ದ ನಿಯೋಗದ ಗಣ್ಯರು ಮತ್ತು ಪುತ್ರಿ ಉಪೀಂದರ್ ಸಿಂಗ್ ಸುತ್ತ ನೆರೆದು ಶುಭ ಕೋರಿದರು.