ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆತ್ಮಹತ್ಯಾ ದಾಳಿಗೆ ತಾಲಿಬಾನ್ ವಿರೋಧಿ ನಾಯಕ ಬಲಿ (Suicide attack | Islamabad | Taliban | Pakistan | Malik)
 
ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದಲ್ಲಿ ಸೋಮವಾರ ನಡೆದ ಆತ್ಮಹತ್ಯಾ ದಾಳಿಯೊಂದರಲ್ಲಿ ತಾಲಿಬಾನ್ ವಿರೋಧಿ ಬುಡಕಟ್ಟು ನಾಯಕ ಮಲಿಕ್ ಅಬ್ದುಲ್ ಹಕೀಂ ಹಾಗೂ ಅವರ ನಾಲ್ವರು ಅನುಯಾಯಿಗಳು ಬಲಿಯಾಗಿದ್ದಾರೆ.

ಬನ್ನು ಪ್ರದೇಶದ ಪೊಲೀಸ್ ಚೌಕಿಯೊಂದರ ಸಮೀಪವೇ ಇಂದು ಮುಂಜಾನೆ ಈ ದಾಳಿ ಸಂಭವಿಸಿದೆ. ಆತ್ಮಹತ್ಯಾ ದಾಳಿಯನ್ನು ನಡೆಸಿದಾತ ತನ್ನ ಬಾಂಬ್‌ಗಳಿಂದ ತುಂಬಿದ್ದ ವಾಹನವನ್ನು ಹಕೀಂ ಅವರಿದ್ದ ಕಾರಿನ ಮೇಲೆ ನುಗ್ಗಿಸಿದನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಹಕೀಂ ಕಾರು ಸಂಪೂರ್ಣ ಭಸ್ಮವಾಗಿದೆ.

ಮಲಿಕ್ ತಾಲಿಬಾನ್ ವಿರುದ್ಧ ಬುಡಕಟ್ಟು ಜನರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಪ್ರಯತ್ನದಿಂದಾಗಿಯೇ ಬುಡಕಟ್ಟು ಶಾಂತಿ ಸಮಿತಿ ರೂಪುಗೊಂಡಿತ್ತು. ತಾಲಿಬಾನ್‌ಗಲ ಪ್ರಭಾವ ಹೆಚ್ಚಿರುವ ಉತ್ತರ ವಜಿರಿಸ್ತಾನದ ಪ್ರಮುಖ ಬುಡಕಟ್ಟು ನಾಯಕರಲ್ಲಿ ಒಬ್ಬರಾಗಿದ್ದ ಹಕೀಂ ತಾಲಿಬಾನ್‌ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದರು.

ಎರಡು ದಿನಗಳ ಹಿಂದಷ್ಟೇ ಬನ್ನು ಪ್ರದೇಶದ ಪೊಲೀಸ್ ಠಾಣೆ ಮೇಲೆ ತಾಲಿಬಾನ್‌ಗಳು ನಡೆಸಿದ ಎರಡು ಆತ್ಮಹತ್ಯಾ ದಾಳಿಗಳಲ್ಲಿ ಹದಿನೈದು ಮಂದಿ ಮೃತಪಟ್ಟು ಸುಮಾರು 60ಮಂದಿ ಗಾಯಗೊಂಡಿದ್ದರು. ಸೆ.24ರಂದು ತಾಲಿಬಾನ್ ಉಗ್ರರು ಬುಡಕಟ್ಟು ನಾಯಕರ ಮೇಲೆ ಗುಂಡಿನ ದಾಳಿ ನಡೆಸಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಒಂಬತ್ತು ಮಂದಿ ಸಶಸ್ತ್ರ ಕಾರ್ಯಕರ್ತರನ್ನು ಕೊಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ