ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಲ್ಲಾ ಮಿಸೈಲ್ ಪರೀಕ್ಷೆ ಯಶಸ್ವಿಯಾಗಿದೆ: ಇರಾನ್ (Tehran | Missile tests | Iran | Shahab-3 | America, India)
 
ಎರಡು ದಿನಗಳ ಕಾಲದಲ್ಲಿ ನಡೆಸಿದ ಮಿಲಿಟರಿ ಶಕ್ತಿ ಪ್ರದರ್ಶನದಲ್ಲಿ ಕೈಗೊಂಡ ಎಲ್ಲಾ ಮಿಸೈಲ್ ಪರೀಕ್ಷೆ ಯಶಸ್ವಿಯಾಗಿರುವುದಾಗಿ ಇರಾನ್ ರೆವಲ್ಯೂಶನರಿ ಗಾರ್ಡ್ಸ್ ಸೋಮವಾರ ತಿಳಿಸಿರುವುದಾಗಿ ಮಾಧ್ಯಮದ ವರದಿಯೊಂದು ಹೇಳಿದೆ.

ರೆವಲ್ಯೂಶನರಿ ಗಾರ್ಡ್ಸ್ ವಕ್ತಾರ ಜನರಲ್ ಹುಸೈನ್ ಸಾಲ್ಮಿ ಸ್ಟೇಟ್ ಟೆಲಿವಿಷನ್‌ಗೆ ಈ ವಿಷಯ ತಿಳಿಸಿದ್ದು, ಕಡಿಮೆ ಹಾಗೂ ದೂರಗಾಮಿ ಮಿಸೈಲ್ ಪ್ರಯೋಗ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಶಾಬಾ-3 ಎಂಬ ಮಿಸೈಲ್ ಸುಮಾರು 2ಸಾವಿರ ದೂರದವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿರುವುದಾಗಿಯೂ ಈ ಸಂದರ್ಭದಲ್ಲಿ ವಿವರಿಸಿದರು. ಇದು ಇರಾನ್‌ನ ಮಿಲಿಟರಿಯಲ್ಲಿ ಪ್ರಮುಖ ಮಿಸೈಲ್ ಆಗಿರುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ