ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷರ್ರಫ್ ವಿರುದ್ಧ ಸಮನ್ಸ್ ಜಾರಿ (Mush | Court | Pakistan | Police | America)
 
ಬಾಲೋಚ್ ರಾಷ್ಟ್ರೀಯ ನಾಯಕ ನವಾಬ್ ಅಕ್ಬರ್ ಬುಗ್ತಿ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅ.7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಮತ್ತು ಸಂಬಂಧಿತ ಕೆಲವರಿಗೆ ಪಾಕಿಸ್ತಾನ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಬಲೂಚಿಸ್ತಾನದ ವಿಭಾಗೀಯ ಪೀಠವು ಮುಷರ್ರಫ್ ವಿರುದ್ಧ ನೋಟಿಸ್ ನೀಡಿದ್ದು, ಮಾಜಿ ಅಧ್ಯಕ್ಷ ಶೌಕತ್ ಅಜೀಜ್, ಮಾಜಿ ಸಚಿವ ಅಫ್ತಾಬ್ ಅಹ್ಮದ್ ಖಾನ್, ಬಲೂಚಿಸ್ತಾನ್ ಗವರ್ನರ್ ಒವೈಸ್ ಅಹ್ಮದ್ ಘನಿ ಅವರಿಗೂ ಕೂಡ ಕೋರ್ಟ್ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿರುವುದಾಗಿ ಹೇಳಿದೆ.

ಇದೀಗ ವಿದೇಶದಲ್ಲಿರುವ ಮುಷರ್ರಫ್ ಈಗಾಗಲೇ ಸಾಕಷ್ಟು ಬಾರಿ ಕೋರ್ಟ್‌ನಿಂದ ಛೀಮಾರಿ ಹಾಕಿಕೊಂಡಿದ್ದು, ಇದೀಗ ಬುಗ್ತಿ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಬಿಕ್ಕಟ್ಟಿಗೆ ಸಿಲುಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ