ಇಸ್ಲಾಮಾಬಾದ್, ಮಂಗಳವಾರ, 29 ಸೆಪ್ಟೆಂಬರ್ 2009( 10:03 IST )
ಕಿಶನ್ ಗಂಗಾ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಭಾರತದೊಂದಿಗಿನ ವಿವಾದ ಇತ್ಯರ್ಥಕ್ಕೆ ದ್ವಿಪಕ್ಷೀಯ ಪ್ರಯತ್ನ ವಿಫಲವಾದಲ್ಲಿ ತಟಸ್ಥ ನಿಲುವಿನ ತಜ್ಞರನ್ನು ನೇಮಕ ಮಾಡುವಂತೆ ಪಾಕಿಸ್ತಾನ ವಿಶ್ವಬ್ಯಾಂಕ್‌ಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.
ಸಿಂಧೂ ಜಲ ಆಯೋಗದ ಮೂಲಕ ವಿವಾದ ಇತ್ಯರ್ಥಕ್ಕೆ ವಿಫಲವಾದ ಬಳಿಕ ಫೆಡರಲ್ ಸರ್ಕಾರವು ಈ ಸಂಬಂಧ ತಟಸ್ಥ ನಿಲುವಿನ ತಜ್ಞರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸುವಂತೆ ವಿದೇಶಾಂಗ ಕಚೇರಿಗೆ ನಿರ್ದೇಶನ ನೀಡಿದೆ. ಸಿಂಧೂ ಜಲ ಒಪ್ಪಂದದ ಪ್ರಕಾರ ಈ ನದಿಯ ಪಶ್ಚಿಮದ ಉಪ ನದಿಗಳ ನೀರನ್ನು ಭಾರತವು ಜಲವಿದ್ಯುತ್‌ಗೆ ಬಳಸಿಕೊಳ್ಳಲು ಅವಕಾಶವಿದೆ.