ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫಿಲಿಪ್ಪೀನ್ಸ್‌ ಪ್ರವಾಹ: ಸತ್ತವರ ಸಂಖ್ಯೆ 240ಕ್ಕೆ ಏರಿಕೆ (Philippine | Manila | Floods | Ketsana)
 
ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ ಭಾರೀ ಪ್ರವಾಹಕ್ಕೆ ಸತ್ತವರ ಸಂಖ್ಯೆ 240ಕ್ಕೇರಿದೆಯೆಂದು ಸರ್ಕಾರ ತಿಳಿಸಿದ್ದು, ಹಿಂದಿನ ದಿನದ ಸಾವಿನ ಸಂಖ್ಯೆಗಿಂತ 100 ಸಾವು ಹೆಚ್ಚಾಗಿದೆ.

ರಾಷ್ಟ್ರದ ರಾಜಧಾನಿ ಮನಿಲಾದಲ್ಲಿ ಸುಮಾರು 90 ಸಾವುಗಳು ದಾಖಲಾಗಿದೆಯೆಂದು ರಾಷ್ಟ್ರೀಯ ಹಾನಿ ಸಮನ್ವಯ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.ಶನಿವಾರ ಕೆಟ್ಸಾನಾ ಚಂಡಮಾರುತದಿಂದ 40 ವರ್ಷಗಳಲ್ಲೇ ಭೀಕರವಾದ ಮಳೆ ಮನಿಲಾದಲ್ಲಿ ಮತ್ತು ನೆರೆಯ ಲುಜಾನ್ ದ್ವೀಪದ ಭಾಗಗಳಲ್ಲಿ ಸುರಿದಿದೆ.

ಅನೇಕ ಮಂದಿ ದುರ್ದೈವಿಗಳು ಪ್ರವಾಹದಲ್ಲಿ ನೀರುಪಾಲಾಗಿದ್ದು, ಹಲವರು ವಿದ್ಯುದಾಘಾತದಿಂದ ಅಥವಾ ಭೂಕುಸಿತದಿಂದ ಸತ್ತಿದ್ದಾರೆಂದು ಮಂಡಳಿ ಹೇಳಿದೆ. ಸುಮಾರು 37 ಜನರು ನಾಪತ್ತೆಯಾಗಿದ್ದು, ಇನ್ನೂ ಐವರು ಗಾಯಗೊಂಡಿದ್ದಾರೆಂದು ಮಂಡಳಿ ತಿಳಿಸಿದೆ.

ಕೆಟ್ಸಾನಾದಿಂದ ದೇಶದ 92 ಮಿಲಿಯ ಜನರಲ್ಲಿ 1.87 ಮಿಲಿಯ ಜನರು ಸಂತ್ರಸ್ತರಾಗಿದ್ದಾರೆ. ಅವರಲ್ಲಿ 374,890 ಜನರು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಮಂಡಳಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ