ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಾರ್ಪೂನ್ ಕ್ಷಿಪಣಿ ನವೀಕರಿಸಿಲ್ಲವೆಂದ ಪಾಕ್ (Pakistan | Missile | Karachi | Harpoon)
 
ಅಮೆರಿಕ ಪೂರೈಸಿದ ಹಾರ್ಪೂನ್ ಹಡಗು ನಿಗ್ರಹ ಕ್ಷಿಪಣಿಯನ್ನು ಭಾರತದ ಗುರಿಗಳ ಮೇಲೆ ದಾಳಿ ಮಾಡುವ ಸಲುವಾಗಿ ಪಾಕಿಸ್ತಾನ ಅಕ್ರಮವಾಗಿ ನವೀಕರಿಸಿದೆಯೆಂಬ ಆರೋಪಗಳನ್ನು ಪಾಕಿಸ್ತಾನ ಸೋಮವಾರ ಅಲ್ಲಗಳೆದಿದೆ. ನಾವು ಯಾವುದೇ ಸಂಪ್ರದಾಯ ಅಥವಾ ತತ್ವಗಳನ್ನು ಉಲ್ಲಂಘಿಸಿಲ್ಲ ಮತ್ತು ಎಲ್ಲ ಅಂತಾರಾಷ್ಟ್ರೀಯ ಕರಾರುಗಳನ್ನು ಪಾಕಿಸ್ತಾನ ನೌಕಾದಳ ಗೌರವಿಸಿದೆಯೆಂದು ನೌಕಾಪಡೆಯ ಮುಖ್ಯಸ್ಥ ಅಡ್ಮೈರಲ್ ನೌಮಾನ್ ಬಷೀರ್ ತಿಳಿಸಿದರು.

ಅಮೆರಿಕದ ಪ್ರತಿಭಟನೆಯು ಕೇವಲ ತಪ್ಪುತಿಳಿವಳಿಕೆಯಿಂದ ಉಂಟಾಗಿದ್ದು, ಸೂಕ್ತ ಮಟ್ಟದಲ್ಲಿ ಸ್ಪಷ್ಟಪಡಿಸಿರುವುದಾಗಿ ಸಮುದ್ರದಲ್ಲಿ ಕಡಲ್ಗಳ್ಳತನದ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶದ ನೇಪಥ್ಯದಲ್ಲಿ ಅವರು ವರದಿಗಾರರಿಗೆ ತಿಳಿಸಿದರು. ಹೆಸರುಹೇಳಲು ಬಯಸದ ಅಮೆರಿಕ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ, ಹಾರ್ಪೂನ್ ಕ್ಷಿಪಣಿಗಳನ್ನು ಮತ್ತು ಪಿ-3ಸಿ ಬೇಹುಗಾರಿಕೆ ವಿಮಾನವನ್ನು ಇಸ್ಲಾಮಾಬಾದ್ ಅಕ್ರಮವಾಗಿ ಆಧುನೀಕರಿಸಿದೆಯೆಂದು ಅಮೆರಿಕ ಅಧಿಕಾರಿಗಳ ಹೇಳಿಕೆಯ ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಕ್ಷಿಪಣಿಗಳನ್ನು ಆಧುನೀಕರಿಸಿದೆಯೆಂಬ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ. ಭಾರತವು ಮಾಧ್ಯಮದ ವರದಿಯನ್ನು ಗಮನಿಸಿದ್ದು, ಕ್ಷಿಪಣಿ ಆಧುನೀಕರಣದಿಂದ ರಾಷ್ಟ್ರೀಯ ಭದ್ರತೆ ಮೇಲೆ ಉಂಟಾಗುವ ಪರಿಣಾಮವನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

ಕಳೆದ ಆಗಸ್ಟ್‌ನಲ್ಲಿ ಕೂಡ, ಪಾಕಿಸ್ತಾನಕ್ಕೆ ನೀಡುವ ಎಲ್ಲ ರೂಪದ ನೆರವನ್ನು ಭಾರತದ ವಿರುದ್ಧ ಗುರಿಗೆ ಬಳಸಲಾಗಿದ್ದು, ಇಸ್ಲಾಮಾಬಾದ್‌‍ಗೆ ಹೆಚ್ಚು ಶಸ್ತ್ರಾಸ್ತ್ರಗಳನ್ನು ಒದಗಿಸುವುದರಿಂದ ಈ ವಲಯದ ಶಾಂತಿ ಪ್ರಕ್ರಿಯೆಗೆ ನೆರವಾಗದು ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅಮೆರಿಕಕ್ಕೆ ಸಂದೇಶ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ